ಶಾಲಾ ವಾರ್ಷಿಕೋತ್ಸವ
ಟೇಕಲ್: ಮಕ್ಕಳು ಉತ್ತಮ ಫಲಿತಾಂಶ ತಂದಾಗ ಶಾಲೆಯ ಕೀರ್ತಿ ಮತ್ತು ಹೆತ್ತವರ ಅಭಿಲಾಷೆ ಈಡೇರುತ್ತದೆಂದು ಪ್ರಾಂಶುಪಾಲೆ ಬಿ.ಎನ್. ಪುಷ್ಪತಿಳಿಸಿದರು.
ಟೇಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾರಿ ಟೇಕಲ್ ಪ್ರೌಢಶಾಲೆ ಉತ್ತಮ ಫಲಿತಾಂಶ ನೀಡುವ ನಿರೀಕ್ಷೆ ಇದೆ ಎಂದರು.
ಶಿಕ್ಷಕ ಬಿ.ಎಂ. ಚಂದ್ರಪ್ಪ ಶಾಲಾ ವರದಿ ಮಂಡಿಸಿದರು. ಮಕ್ಕಳು ನೀಡಿದ ಸಾಂಸ್ಕೃತಿ ಕಾರ್ಯಕ್ರಮಗಳು ಮನಸೂರೆಗೊಂಡಿತು. ವೆಂಕಟಪತಿ, ಪದ್ಮನಾಭಯ್ಯ, ಗೋವರ್ದನ್, ಶಿಕ್ಷಕರಾದ ಪದ್ಮಾವತಿ, ಕೆ. ಗೀತಾ, ಪುಷ್ಪಲತಾ, ರಾಧಮ್ಮ, ಶಕುಂತಲಾ, ಎನ್.ಎಸ್. ರಂಗನಾಥ್ ಇದ್ದರು.
ಸಕಾಲ ಕುರಿತ ಚಿತ್ರಕಲಾ ಸ್ಪರ್ಧೆ
ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ತಾಲೂಕು ಮಟ್ಟದ ಸಕಾಲ ವಿಷಯದ ಕುರಿತ ಚಿತ್ರಕಲಾ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕೆ.ವಿ. ಲಾವಣ್ಯ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುವ ವಿದ್ಯಾರ್ಥಿನಿ ಲಾವಣ್ಯ ಹಾಗೂ ಮಾರ್ಗದರ್ಶಿ ಶಿಕ್ಷಕ ಸಂತೋಷ್ ಕುಮಾರ್ರನ್ನು ಶಾಲೆಯ ಮುಖ್ಯ ಶಿಕ್ಷಕಿ ಇಂದ್ರಾಣಿ, ಸಹಶಿಕ್ಷಕರಾದ ಗಣೇಶ, ಮಂಜುಳ, ನೇತ್ರಾವತಿ, ರಮೇಶ ಪೂಜಾರಿ, ನಾಗರಾಜ್, ಜ್ಞಾನೇಶ್ವರಿ, ಆದಿನಾರಾಯಣಪ್ಪ, ಉಷಾ, ಶೈಲಾ, ಶೈಲಾ, ಸುನಂದಾ ಮತ್ತು ವೀಣಾ ಅಭಿನಂದಿಸಿದರು.
ಕೋಚಿಮುಲ್ ಖರೀದಿ ವಿಭಾಗದ ಅಧಿಕಾರಿ ಎತ್ತಂಗಡಿ
ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಖರೀದಿ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ.ಎ.ಬಿ. ಲೋಕೇಶ್ ಅವರನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಹನುಮೇಶ್ ಆದೇಶ ಹೊರಡಿಸಿದ್ದಾರೆ. ಡಾ. ಲೋಕೇಶ್ ಜಾಗಕ್ಕೆ ಕೋಚಿಮುಲ್ನ ಖರೀದಿ ವಿಭಾಗದ ಉಪ ವ್ಯವಸ್ಥಾಪಕ ಎಂ.ಕೆ. ವಿಶ್ವನಾಥ್ ಅವರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಡಾ.ಲೋಕೇಶ್ ಕೆಎಂಎಫ್ನಿಂದ ಯರವಲು ಸೇವೆಯ ಆಧಾರದ ಮೇಲೆ ಕೋಚಿಮುಲ್ನಲ್ಲಿ ಖರೀದಿ ವಿಭಾಗದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.