ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಂಗಾರು ತಿರುಪತಿ ಶ್ರೀವೆಂಕಟೇಶ್ವರ ದೇಗುಲಕ್ಕೆ ಭದ್ರತೆ ಯಾವಾಗ?

Srinivasa Murthy VN
Updated On : 9 May 2014, 12:15 pm

ಬಂಗಾರಪೇಟೆ: ದೊಡ್ಡ ದೊಡ್ಡ ದೇವಾಲಯಗಳಿಗೆ ಸರ್ಕಾರ ಸೂಕ್ತ ಭದ್ರತೆಯನ್ನು ಕಲ್ಪಿಸಬೇಕೆಂದು ಆಡಳಿತ ಮಂಡಳಿ ಮುಜರಾಯಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರೂ, ಇನ್ನೂ ಭದ್ರತೆ ಸಾಧ್ಯವಾಗಿಲ್ಲ. ಹಾಗಾಗಿ ದೇಗುಲಗಳಲ್ಲಿ ಆಗಾಗ ಕಳ್ಳತನ ಪ್ರಕರಣಗಳು ನಡೆಯುತ್ತಿವೆ.
ತಾಲೂಕಿನ ಬೇತಮಂಗದಲ್ಲಿರುವ ಬಂಗಾರು ತಿರುಪತಿ ಶ್ರೀವೆಂಕಟೇಶ್ವರ ದೇಗುಲದಲ್ಲಿ ಆಗಾಗ ಕಳ್ಳತನವಾಗುತ್ತಲೇ ಇರುತ್ತದೆ. ಖ್ಯಾತ ದೇಗುಲಕ್ಕೆ ಇದುವರೆಗೂ ಭದ್ರತೆ ಕಲ್ಪಿಸದಿರುವುದ ವಿಪರ್ಯಾಸ. 6 ತಿಂಗಳ ಹಿಂದೆ ದೇವಾಲಯದ ಹುಂಡಿ ಹಣವನ್ನು ಕದಿಯಲಾಗಿತ್ತು. ಈ ಬಗ್ಗೆ ಬೇತಮಂಗಲ ಪೊಲೀಸ್‌ರಿಗೆ ದೂರು ನೀಡಿದ್ದರೂ ಇದುವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ದೇವಾಲಯದಲ್ಲಿ ನಡೆಯುವ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾವಹಿಸಲು ಸಿಸಿ ಕ್ಯಾಮೆರಾ ಅಳವಡಿಸುವಂತೆ ದೇವಾಲಯ ನಿರ್ವಾಹಣಾ ಸಮಿತಿ ಧಾರ್ಮಿಕ ಇಲಾಖೆಗೆ ಸಲ್ಲಿಸಿದ್ದ ಮನವಿ ಕಸದ ಬುಟ್ಟಿಗೆ ಸೇರಿದೆ.
ಧಾರ್ಮಿಕ ಕಾಯ್ದೆಗೆ ತಿದ್ದುಪಡೆ ತರಲಾಗಿದ್ದು, ದೇವಾಲಯದ ಆಡಳಿತಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಸಮಿತಿ ಕೈಗೊಳ್ಳುವ ನಿರ್ಣಯಗಳನ್ನು ಇಒ ಅನುಷ್ಠಾನಕ್ಕೆ ತರಬಹುದು. ಆದರೆ, ಸದ್ಯಕ್ಕೆ ದೇವಾಲಯದ ನಿರ್ವಹಣಾ ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಹೊಸ ರಚನೆ ಮಾಡುವವರೆಗೂ ಅಧಿಕಾರಿಗಳದ್ದೇ ಕಾರುಬಾರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement