ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಶ್ರೀ ವಾಲ್ಮಿಕಿ ಯಾರು' ಕೃತಿ ಮುಟ್ಟುಗೋಲಿಗೆ ಒತ್ತಾಯ

Srinivasa Murthy VN
Updated On : 9 May 2014, 12:17 pm

ಕೋಲಾರ: ಡಾ.ಕೆ.ಎಸ್. ನಾರಾಯಣಚಾರ್ಯರವರು ಬರೆದಿರುವ ಶ್ರೀ ವಾಲ್ಮಿಕಿ ಯಾರು ಎಂಬ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲೂರು ಎನ್.ವೆಂಕಟರಾಮ್ ಭಾರತ ದೇಶದ ವಾಲ್ಮೀಕಿ ನಾಯಕ ಜನಾಂಗದ ಆರಾಧ್ಯ ದೈವ ಮಹರ್ಷಿ ವಾಲ್ಮೀಕಿ ಬೇಡನಲ್ಲ ಬ್ರಾಹ್ಮಣ ಎಂದು ತನ್ನ ಕೃತಿಯಲ್ಲಿ ಬರೆದಿದ್ದು ವಾಲ್ಮೀಕಿ ಅಸ್ತಿತ್ವವನ್ನು ಪ್ರಶ್ನೆ ಮಾಡಲು ಎಸ್. ನಾರಾಯಣಚಾರ್ಯರವರು ಮುಂದಾಗಿರುವುದು ಖಂಡನೀಯ ಎಂದರು.
ಈ ರೀತಿಯ ಹೇಳಿಕೆಗಳನ್ನು ನೀಡುವುದು ಮತ್ತು ಕೃತಿಗಳನ್ನು ಬಿಡುಗಡೆ ಮಾಡುವುದು ಸಮಾಜದಲ್ಲಿ ಜಾತಿಜಾತಿಗಳ ಮಧ್ಯೆ ಶಾಂತಿಭಂಗ ಮತ್ತು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಲು ಮುಂದಾಗಿರುವ .ಎಸ್.ನಾರಾಯಣಚಾರ್ಯರವರ ಶ್ರೀ ವಾಲ್ಮಿಕಿ ಯಾರು ಎಂಬ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ನಾಯಕ ಜನಾಂಗದ ಭಾವನೆಗಳಿಗೆ ಅವಮಾನ ಮಾಡಿರುವ ಇವನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳನ್ನು ಸಮಿತಿಯ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವಾಗ ಜಿಲ್ಲಾಧ್ಯಕ್ಷ ಎಂ. ಬಾಲಗೋವಿಂದ, ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಕುಡುವನಹಳ್ಳಿ ಆನಂದ್, ಸುಗಟೂರಿನ ವಕೀಲ ಎಸ್.ಎಂ. ನಾಗರಾಜ್, ಗುಟ್ಟಹಳ್ಳಿ ಶ್ರೀನಿವಾಸ್, ಗರುಡನಹಳ್ಳಿ ಪಿಳ್ಳಪ್ಪನಾಯ್ಕ, ರಾಜಪ್ಪ, ಚಿಕ್ಕತಿರುಪತಿ ವಿಜಯಕುಮಾರ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement