ಕಾಲೇಜ್ಗೆ 'ರಾಯಲ್' ಫಲಿತಾಂಶ
ಚಿಂತಾಮಣಿ: ನಗರದ ರಾಯಲ್ ಕಾಲೇಜ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.98, ವಾಣಿಡ್ಯ ವಿಭಾಗದಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದೆ.
ವಿಜ್ಞಾನ ವಿಭಾಗದಲ್ಲಿ ಕುಮಾರಿ ಪ್ರಗತಿ.ಬಿ -587 ಅಂಕಗಳನ್ನು ಪಡೆದು ಜಿಲ್ಲೆಯಲ್ಲೇ ಪ್ರಥಮಸ್ಥಾನ ಗಳಿಸಿದ್ದಾರೆ. ಎಸ್.ನರ್ಮದ- 585, ನವಿತ.ಎನ್-582, ಶ್ರೀಲಲಿತ.ಕೆ-580, ಚಂದನ್.ಡಿ-578, ಸಾಯಿಕುಶಲ್.ಎಸ್-572, ತನುಶ್ರೀ ರಾಮ್.ಕೆ-563, ಹರ್ಷಿತ್.ಜಿ-557, ಶ್ವೇತ.ಬಿ.ಎಸ್-550, ಸ್ಫೂರ್ತಿ ಕೆ. ೆ-535 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕೆ.ವಿ.ಸುಗುಣ-564, ಸಂತೋಷ್.ಬಿ.ಆರ್-563, ಸುಪ್ರಿಯ.ಎಸ್.ಆರ್-557, ಭರತ್.ಎಚ್-556, ಸಂತೋಷ್.ಪಿ.ಎಂ-552, ಸ್ನೇಹಾರೆಡ್ಡಿ-552, ಕೃಷ್ಣಕಾಂತ್ ಯಾದವ್-551,ಅರುಣಕುಮಾರ್.ಎ-550, ಅರುಣ.ಸಿ.ಎಸ್-546, ದರ್ಶಿನಿ.ಎನ್-544, ಶಾಜಿಯ ಶಬನಮ್-543, ಸಯ್ಯದ್ ಸಲ್ಮಾನ್.ಜಿ.ಎಸ್-540 ಅಂಗ ಗಳಿಸಿದ್ದಾರೆ. ವಿದ್ಯಾರ್ಥಿಗಳನ್ನು ರಾಯಲ್ ಸಂಸ್ಥೆ ಅಧ್ಯಕ್ಷರಾದ ಕೆ.ರಾಮಕೃಷ್ಣ ಹಾಗೂ ಪ್ರಾಂಶುಪಾಲರಾದ ಪ್ರೇಮಲತರವರು ಶ್ಲಾಘಿಸಿದ್ದಾರೆ.
ಟೇಕಲ್ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ
ಟೇಕಲ್: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿ ಶೇ.40 ರಷ್ಟು ಫಲಿತಾಂಶ ಬಂದಿದ್ದು ಒಟ್ಟು 56 ಮಂದಿ ಪರೀಕ್ಷೆಗೆ ಕುಳಿತಿದ್ದು ಪ್ರಥಮ ಶ್ರೇಣಿಯಲ್ಲಿ 12, ದ್ವಿತೀಯ 10, ಹಾಗೂ 8 ಮಂದಿ ಪಾಸಾಗಿದ್ದು ಕಲಾ ವಿಭಾಗದಲ್ಲಿ ದೊಡ್ಡಮಲ್ಲೆ ಗ್ರಾಮದ ಎಸ್. ನಾರಾಯಣಸ್ವಾಮಿ 507 ಅಂಕ ಪಡೆದು ಕಾಲೇಜಿಗೆ ಮೊದಲಿಗರಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಟೇಕಲ್ನ ಪಲ್ಲವಿ 448 ಅಂಕಗಳಿಸಿ ಪ್ರಥಮರಾಗಿದ್ದಾರೆಂದು ಪ್ರಾಂಶುಪಾಲ ಕೆ.ಪಾಪಣ್ಣ ತಿಳಿಸಿದ್ದಾರೆ.