ತನಿಕೊಡು ಎನ್‌ಕೌಂಟರ್: ಬಂಧಿತರ ಬಿಡುಗಡೆಗೆ ಆಗ್ರಹ
ಮಾಲೂರು: ತನಿಕೊಡು ಎನ್‌ಕೌಂಟರ್ ಪ್ರಕರಣದಲ್ಲಿ ಎ.ಎನ್.ಎಫ್. ಯೋಧರನ್ನು ಅಪರಾಧಿಯಾಗಿ ಪರಿಗಣಿಸಿ ಬಂಧಿಸಿರುವುದು ರಾಜಕೀಯ ಪ್ರೇರಿತರಾಗಿದ್ದು, ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ಶ್ರೀರಾಮ ಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಅರ್ಪಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ ರಾಮ ಸೇನೆಯ ತಾಲೂಕು ಅಧ್ಯಕ್ಷ ಭರತ್‌ಭೂಷಣ್ ಮಾತನಾಡಿ ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಸ್ಥಳ ಪರಿಶೀಲನೆಯಲ್ಲಿ ಎ.ಎನ್.ಎಫ್. ಯೋಧ ನವೀನ್ ನಾಯಕ್ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿರುವುದು ಕಂಡು ಬಂದಿದ್ದರೂ ಮುಸ್ಲಿಮರ ಓಲೈಕೆಗಾಗಿ ಸರ್ಕಾರವು ಇದುವರೆಗೂ ಅವರನ್ನು ಬಿಡುಗಡೆ ಮಾಡದೆ ಇರುವುದು ಖಂಡನೀಯ ಎಂದ ಭರತ್‌ಭೂಷಣ್ ರವರು ಸತ್ತ ಕಬೀರ್ ಒಬ್ಬ ಹಸುಕಳ್ಳ ರಾಗಿರುವುದು ದೃಡಪಟ್ಟಿದ್ದರೂ ಆತನ ಸಾವಿಗೆ ರಾಜ್ಯ ಸರ್ಕಾರ ಹತ್ತು ಲಕ್ಷ ರು.ನೀಡಿರುವುದು ಮತ ಬ್ಯಾಂಕ್‌ಗಾಗಿಯೇ ಹೊರತು ಅನುಕಂಪಕ್ಕಾಗಿ ಅಲ್ಲ ಎಂದು ದೂರಿದರು. ಸಂತೋಷ್, ರಮೇಶ್, ಭಾನುತೇಜ, ಮನೋಹರ ಯಾದವ್ ಇದ್ದರು.
ಪೇದೆಗಳ ನೇಮಕಕ್ಕೆ 12ರಿಂದ ದೇಹದಾರ್ಢ್ಯ ಪರೀಕ್ಷೆ
ಕೆಜಿಎಫ್: ಜಿಲ್ಲೆಯಲ್ಲಿ ಖಾಲಿ ಇರುವ 46 ಸಿಪಿಸಿ ಮತ್ತು 11 ಮಹಿಳಾ ಪೇದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಈಗಾಗಲೇ ಅರ್ಜಿ ಸಲ್ಲಿಸಿದವರೆಗೆ ಸಹಿಷ್ಣುತೆ ಹಾಗೂ ದೇಹದಾರ್ಢ್ಯತೆ ಪರೀಕ್ಷೆಯನ್ನು ಮೇ 12 ರಿಂದ 22ರ ವರೆಗೆ ಉರಿಗಾಂನಲ್ಲಿರುವ ಡಾ.ಅಂಬೇಡ್ಕರ್ ಕ್ರೀಡಾಂಗಳದಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಹೇಳಿದ್ದಾರೆ. ಕೆಜಿಎಫ್ ಘಟಕದಲ್ಲಿ ಖಾಲಿಯಿರುವ 57 ನಾಗರಿಕ ಕಾನ್ಸ್‌ಟೇಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಅರ್ಜಿ ಆಹ್ವಾನಿಸಲಾಗುತ್ತಿದೆ ಎಂದರು. ಕರೆಪತ್ರದಲ್ಲಿನ ಸೂಚನೆಗಳನ್ವಯ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಹಿಷ್ಣುತೆ ಮತ್ತು ದೇಹದಾರ್ಢ್ಯೆತೆ ಪರೀಕ್ಷೆಗೆ ಹಾಜರಾಗಲು ಜಿಲ್ಲಾ ಎಸ್‌ಪಿ ಅಜಯ್ ಹಿಲೋರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.