ರು. 8 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ
ದೊಡ್ಡಮಾಲೂರು-ಶ್ರಾವಂಡನಹಳ್ಳಿ ರಸ್ತೆಗೆ ಗುದ್ದಲಿ ಪೂಜೆ
ಮಧುಗಿರಿ: ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯಲ್ಲಿ 8 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಕೆ.ಎನ್. ರಾಜಣ್ಣ ಗುದ್ದಲಿ ಪೂಜೆ ನೆರವೇರಿಸಿದರು.
ದೊಡ್ಡಮಾಲೂರು-ಶ್ರಾವಂಡನಹಳ್ಳಿ ರಸ್ತೆಗೆ 1 ಕೋಟಿ ವೆಚ್ಚದ ಕಾಮಗಾರಿಯನ್ನು ಗುತ್ತಿಗೆದಾದಾರರು ಶೀಘ್ರ ಗುಣ ಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಎಂದರು.
ತೆರಿಯೂರು-ಆಂಧ್ರ ಗಡಿಗೆ ರಸ್ತೆ ಅಗಲೀಕರಣ, ಡಾಂಬರೀಕರಣಕ್ಕೆ 5 ಕೋಟಿ, ಯಾಕಾರ್ಲಹಳ್ಳಿ -ಚಂದನದೂರು ರಸ್ತೆಗೆ 2 ಕೋಟಿ, ಕಾಮಗಾರಿಗೆ ಚಾಲನೆ ನೀಡಿದ ರಾಜಣ್ಣ, ಚುನಾವಣೆ ವೇಳೆ ಈ ಹೋಬಳಿ ಜನರು ಹೆಚ್ಚು ಮತ ನೀಡಿದ್ದು, ಈ ಭಾಗದ ಜನರ ಮೇಲೆ ಹೆಚ್ಚು ಪ್ರೀತಿ, ವಿಶ್ವಾಸವಿದೆ ಎಂದರು.
ದೊಡ್ಡಮಾಲೂರಿನಲ್ಲಿ ಪಶುವೈದ್ಯ ಶಾಲೆ ತೆರಿಯೂರಿನಲ್ಲಿ 12 ಕೋಟಿ ವೆಚ್ಚದ ವಿದ್ಯುತ್ ಉಪ ಸ್ಥಾವರ ಘಟಕ ಸ್ಥಾಪಿಸಿ ಸಚಿವ ಡಿ.ಕೆ. ಶಿವಕುಮಾರ ಕರೆಸಿ ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಿದರು.
ತೆರಿಯೂರು ಗ್ರಾಮಕ್ಕೆ ನೀರು ಸಂಸ್ಕರಣ ಘಟಕ ಸ್ಥಾಪಿಸಿ ಶುದ್ಧ ಕುಡಿವ ನೀರು ಕೊಡಲು ಅಗತ್ಯ ಕ್ರಮ ಕೈಗೊಳ್ಳವುದಾಗಿ ತಿಳಿಸಿದರು.
ತಾಪಂ ಉಪಾಧ್ಯಕ್ಷ ಜಿ. ನರಸಿಂಹಯ್ಯ, ವಿಎಸ್ಎಸ್ಎನ್ ಅಧ್ಯಕ್ಷ ಸಂಜೀವಗೌಡ, ಜಿಪಂ ಸದಸ್ಯೆ ಶಾಂತಲ, ತಹಸೀಲ್ದಾರ್ ಕೆ. ರಮೇಶ್, ಇಇ ವಾಸುದೇವ್, ಡಿಸಿಸಿ ಬ್ಯಾಂಕ್ ಸೀತಾರಾಮು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಆಶಾ ಪ್ರಸನ್ನಕುಮಾರ್ ಇದ್ದರು.