ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದಲಿತರಿಗೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ: ರಾಜಾಕಾಂತ್

Srinivasa Murthy VN
Updated On : 20 May 2014, 12:20 pm

ಶಿಡ್ಲಘಟ್ಟ: ದಲಿತರು ಮತಬ್ಯಾಂಕ್‌ಗೆ ಮಾತ್ರ ನೆನಪಾಗುತ್ತಾರೆ. ಚುನಾವಣೆ ಮುಗಿದ ನಂತರ ನೆನಪಾಗುವುದಿಲ್ಲವೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಕೆ.ಸಿ. ರಾಜಾಕಾಂತ್ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಚೀಮಂಗಲ ಗ್ರಾಪಂ ವ್ಯಾಪ್ತಿಯ ನಾರಾಯಣದಾಸರಹಳ್ಳಿಯಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.  ಜಿಲ್ಲಾ ಸಂಚಾಲಕ ಸಿ.ಎಂ. ಮುನಿಯಪ್ಪ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದಲಿತರಿಗೆ ಸಿಗಬೇಕಾದ ಸಾಮಾಜಿಕ ನ್ಯಾಯಸಿಗುತ್ತಿಲ್ಲ ಎಂದರು. ತಾಲೂಕು ಸಂಚಾಲಕ ವೆಂಕಟೇಶ್ ಮಾತನಾಡಿದರು. ಪತ್ರಕರ್ತರ ಸಂಘದ ಜಿಲ್ಲಾ ಸದಸ್ಯ ಕೆ.ವಿ. ಮುನೇಗೌಡ, ಗ್ರಾಪಂ ಸದಸ್ಯ ರಾಮಪ್ಪ, ತಾ.ಸಂ. ಸಂಚಾಲಕ ಟಿ.ಎ.ಚಲಪತಿ, ಸಿ.ಎಂ. ಲಕ್ಷ್ಮೀನಾರಾಯಣ, ಡಿ.ಎಂ. ವೆಂಕಟೇಶ್, ಸತೀಶ್, ಶ್ರೀನಿವಾಸ್, ಚೌಡಪ್ಪ,  ಆಂಜಿ, ಓಬಳೇಶ ಇದ್ದರು.

ಬುದ್ಧಿಮಾಂದ್ಯ ಮಕ್ಕಳಿಗೆ ಬೇಸಿಗೆ ಶಿಬಿರ
ಕೋಲಾರ: ಇಂಚರ ಹಾಗೂ ಅಂತರಗಂಗಾ ವಿದ್ಯಾಸಂಸ್ಥೆಯ ವತಿಯಿಂದ ಬುದ್ಧಿಮಾಂದ್ಯ ಹಾಗೂ ವಿಕಲಚೇತನ ಮಕ್ಕಳಿಗೆ 'ಚಿಣ್ಣರ ಕಲರವ' ಬೇಸಿಗೆ ಶಿಬಿರವನ್ನು ಮೇ 21 ರಿಂದ 26ವರೆಗೂ ಹಮ್ಮಿಕೊಳ್ಳಲಾಗಿದೆ.
   ಶಿಬಿರದಲ್ಲಿ ಹಾಡು, ಜಾನಪದ ನೃತ್ಯ, ಚಿತ್ರಕಲೆ, ಕರಕುಶಲಕಲೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ತರಬೇತಿ ನೀಡಲಾಗುವುದು. ಶಿಬಿರದಲ್ಲಿ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
 ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಅಂತರಗಂಗಾ ವಿದ್ಯಾಸಂಸ್ಥೆ ಕೋಲಾರ ಇಲ್ಲಿ ಅಥವಾ ದೂರವಾಣಿ ಸಂಖ್ಯೆ ಶಂಕರ್ 9448114778, ನಾರಾಯಣಸ್ವಾಮಿ 9141897812 ಇವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement