ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

32 ಮಕ್ಕಳು ಒಡಿಶಾಗೆ ಬೀಳ್ಕೊಡುಗೆ

Srinivasa Murthy VN
Updated On : 29 May 2014, 1:38 am

ಚಿಕ್ಕಬಳ್ಳಾಪುರ: ವಿವಾದಿತ ಸ್ವಯಂ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದುಕೊಂಡಿದ್ದ ಒಡಿಶಾದ 32 ಮಕ್ಕಳನ್ನು ಜಿಲ್ಲಾಡಳಿತದ ವತಿಯಿಂದ ಪುನಃ ಅವರ ಪೋಷಕರ ಬಳಿಗೆ ಕಳುಹಿಸಲಾಯಿತು.  
ಜಿಲ್ಲಾಡಳಿತ ಭವನದಲ್ಲಿ 12 ಬಾಲಕರು ಮತ್ತು 20 ಬಾಲಕಿಯರಿಗೆ ಸಿಹಿಯನ್ನು ಕೊಟ್ಟು ಆತ್ಮೀಯವಾಗಿ ಬೀಳ್ಕೊಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸುರೇಖಾ ವಿಜಯ್ ಪ್ರಕಾಶ್ ಮಾತನಾಡಿ, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದಾಗಿ ಹೇಳಿ ಒಡಿಶಾದಿಂದ ಚಿಂತಾಮಣಿಯ ಊಲವಾಡಿಯ ಬಾರ್ನ್  ಫೌಂಡೇಶನ್ ಸಂಸ್ಥೆ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದಿತ್ತು. ಈ ಬಗ್ಗೆ ಒಡಿಶಾದ ಮಾನವ ಹಕ್ಕು ಹೋರಾಟಗಾರರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಒಡಿಶಾದ ಅಧಿಕಾರಿಗಳು ತಂಡ ಜೊತೆಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕಾರ್ಯಾಚರಣೆ ನಡೆಸಿ 32 ಮಕ್ಕಳನ್ನು ಸ್ವಯಂ ಸೇವಾ ಸಂಸ್ಥೆಯಿಂದ ಬಿಡಿಸಿಕೊಂಡು ಬಂದಿದೆ ಎಂದರು. ತಾತ್ಕಾಲಿಕವಾಗಿ ಮಕ್ಕಳಿಗೆ ಇಲ್ಲಿನ ಮಕ್ಕಳ ರಕ್ಷಣಾ ಘಟಕದ ಕಚೇರಿಯಲ್ಲಿ ವ್ಯವಸ್ಥೆಯನ್ನು ಮಾಡಿದ್ದು ಇದೀಗ ಒಡಿಶಾಗೆ ಮಕ್ಕಳನ್ನು ಆತ್ಮೀಯವಾಗಿ ಕಳುಹಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಧಾಕರ್, ಒರಿಸ್ಸಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement