ಮಳೆ: ಲಕ್ಷಾಂತರ ರುಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ನಾಶ
ಚಿಂತಾಮಣಿ: ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಬಾರಿ ಗುಡುಗು ಮಿಂಚಿನಿಂದ ಲಕ್ಷಾಂತರ ರುಪಾಯಿ ಮೌಲ್ಯದ ಗೃಹಪಯೋಗಿ ವಸ್ತುಗಳು ನಾಶವಾಗಿವೆ. ಅಲ್ಲದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯವಸ್ತವಾಗಿದೆ.
ಕಾಚಹಳ್ಳಿ, ನಾಯಿಂದ್ರಹಳ್ಳಿ, ಊಲವಾಡಿ, ಕೆಂಚಾರ್ಲಹಳ್ಳಿ, ಬಟ್ಲಹಳ್ಳಿ, ಕೈವಾರ ಸುತ್ತಮುತ್ತಲಿನಲ್ಲಿ ಮಂಗಳವಾರ ಸಂಜೆ ಭಾರಿ ಮಳೆ ಸುರಿದಿದೆ. ಗ್ರಾಮೀಣ ಹಾಗೂ ನಗರದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ನಷ್ಟ ಸಂಭವಿಸದೆ.
ಚಿಂತಾಮಣಿ ನಗರದ ಅಶ್ವಿನಿ ಬಡಾವಣೆಯ ಪಿಡಿಒ ಲಕ್ಷ್ಮಿನಾರಾಯಣ ಮನೆಯಲ್ಲಿ ಸಾವಿರಾರು ಬೆಲೆ ಬಾಳುವ ಟಿವಿ ನಾಶವಾಗಿದೆ. ಇನ್ನೂ ಹಲವು ಬಡಾವಣೆಗಳ ಮನೆಗಳಲ್ಲಿನ ಕಂಪ್ಯೂಟರ್, ಟಿ.ವಿ, ರೆಪ್ರಿಜರೇಟರ್ ಸೇರಿದಂತೆ ಲಕ್ಷಾಂತರ ರುಪಾಯಿ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ. ಅಲ್ಲದೆ, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೂ ನೀರು ನುಗ್ಗಿದೆ. ಹಾಗಾಗಿ, ಬಹುತೇಕ ಬಡಾವಣೆಗಳಲ್ಲಿ ರಾತ್ರಿ ಪೂರ್ತಿ ವಿದ್ಯುತ್ ಇರಲಿಲ್ಲ.
ಮಕ್ಕಳು, ಮಹಿಳೆಯರು ರಾತ್ರಿಯಲ್ಲಾ ನೀರನ್ನು ಹೊರ ಹಾಕುತ್ತಾ ಜಾಗರಣೆ ಮಾಡುವ ಪರಿಸ್ಥಿತಿ ಎದುರಾಯಿತು.