ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡೋಂಗಿ ಸೇವಾ ಸಂಸ್ಥೆಗಳ ವಿರುದ್ಧ ಎಚ್ಚರಿಕೆಗೆ ಸಂಘಟನೆಗಳ ಆಗ್ರಹ

Srinivasa Murthy VN
Updated On : 30 May 2014, 1:43 am

ಚಿಂತಾಮಣಿ: ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ನೆಪದಲ್ಲಿ ಅವರನ್ನು ಬಲವಂತಾಗಿ ಸರ್ಕಾರೇಂತರ ಸಂಸ್ಥೆಗಳು ಮತಾಂತರಗೊಳಿಸುವ ಯತ್ನ ಮಾಡುತ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕೆಂದು ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಚಿಂತಾಮಣಿಯಲ್ಲಿ ಬಡಮಕ್ಕಳಿಗೆ ಆಶ್ರಯ ನೀಡಿ, ವಿದ್ಯಾಭ್ಯಾಸ ನೀಡುವ ಆಸೆ ಆಮಿಷ ತೋರಿ ಹಲವು ವಿವಾದಿತ ಹಲವು ಸ್ವಯಂ ಸೇವಾ ಸಂಸ್ಥೆಗಳು ಮತಾಂತರಕ್ಕೆ ಮುಂದಾಗುತ್ತಿವೆ.
2 ದಿನಗಳ ಹಿಂದೆ ಹೊರ ರಾಜ್ಯದ ಮಾನವ ಹಕ್ಕು ಹೋರಾಟಗಾರರು ನೀಡಿದ ದೂರಿನ ಅನ್ವಯ ಪೊಲೀಸರು ಹಾಗೂ ಹಲವು ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ರಕ್ಷಿಸಿ ಪೋಷಕರ ವಾಪಸ್ ನೀಡುವ ಕೆಲಸ ಮಾಡಿದ್ದಾರೆ. ಹಲವು ವಿದೇಶಿ ಸರ್ಕಾರೇತರ ಸಂಸ್ಥೆಗಳು ಚಿಂತಾಮಣಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಖರೀದಿಸಿ ಶಿಕ್ಷಣ ವ್ಯಾಪಾರ ಮತ್ತು ಮತಾಂತರ ಮಾಡುವ ಯತ್ನಕ್ಕೆ ಮುಂದಾಗಿವೆ. ಇನ್ನೂ ಮುಂದಾದರೂ ಸಂಬಂಧಪಟ್ಟ ಜಿಲ್ಲಾ ಆಡಳಿತ ಇಂಥ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ವಿವಿಧ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.

ಪ್ರಾಥಮಿಕ ಸಹಕಾರ ಸಂಘಕ್ಕೆ ಆಯ್ಕೆ
ರಾಮನಾಥಪುರ: ರಾಮನಾಥಪುರ ಹೋಬಳಿ ಕಾಳೇನಹಳ್ಳಿ ಗ್ರಾಮದ ಕೆ.ಟಿ. ಯೋಗಣ್ಣ ಪ್ರಾಥಮಿಕ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ. 10 ಸದಸ್ಯರ ಸಂಖ್ಯಾ ಬಲದ ಅರಕಲಗೂಡು ತಾಲೂಕಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ನಡೆಯಿತು. ಕೆ.ಟಿ.ಯೋಗಣ್ಣ 7 ಮತ ಪಡೆಯುವ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ವೇಳೆ ಜೆಡಿಎಸ್  ರಾಜ್ಯ ಉಪಾಧ್ಯಕ್ಷ ಹೊನ್ನವಳ್ಳಿ ಸತೀಶ್, ಹೋಳೆನರಸೀಪುರ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಸ್. ಶಂಕರ್, ಗ್ರಾ.ಪಂ. ಸದಸ್ಯ ಗೋವಿಂದೇಗೌಡ ಇತರರು ಇದ್ದರು. ಚುನಾವಣಾಧಿಕಾರಿಯಾಗಿ ಮಾದೇಗೌಡ ಭಾಗವಹಿಸಿದ್ದರು.
ಅಭಿನಂದನೆ: ರಾಮನಾಥಪುರ ಜಿಲ್ಲಾ ಪಂಚಾಯತಿ ಸದಸ್ಯೆ ಸರೋಜಮ್ಮ ರಾಮೇಗೌಡ, ಮಾಜಿ ಸದಸ್ಯ ಎಚ್.ಎಸ್. ಶಂಕರ್, ರುದ್ರಪಟ್ಟಣ ಗ್ರಾ.ಪಂ. ಸದಸ್ಯ ಗೋವಿಂದೇಗೌಡ, ಶೇಖರ್, ಮಂಜುನಾಥ್, ಮಧುರನಹಳ್ಳಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಮುಂತಾದವರು ಅಭಿನಂದನೆ ಸಲ್ಲಿಸಿದರು.

ಎಸ್‌ಬಿಎಂ ಶಾಖೆಯ ಎಟಿಎಂ ಕೇಂದ್ರ ಪ್ರಾರಂಭ
ಹಾಸನ: ಬಹಳ ದಿವಸಗಳಿಂದ ಸಾರ್ವಜನಿಕರ ಒತ್ತಾಯದ ಮೇರೆಗೆ ಹಾಸನ ತಾಲೂಕು ಶಾಂತಿಗ್ರಾಮದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಎಟಿಎಂ ಕೇಂದ್ರವನ್ನು ಇತ್ತೀಚೆಗೆ  ಪ್ರಾರಂಭಿಸಲಾಗಿದೆ. ಈ ಬ್ಯಾಂಕಿನ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಎಟಿಎಂ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಶಾಂತಿಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ವ್ಯವಸ್ಥಾಪಕ ಎಸ್. ವಿನಯ್ ಕೋರಿದ್ದಾರೆ.

ಕಾನಸ್ಟೇಬಲ್ ಹುದ್ದೆಗೆ ತರಬೇತಿ
ಹಾಸನ: ನಗರದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ವತಿಯಿಂದ ನಡೆಯುತ್ತಿರುವ ಬಿಜಿಎಸ್ ಸ್ಟಡಿ ಸೆಂಟರ್‌ನಲ್ಲಿ ಪೋಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ತರಬೇತಿ ನೀಡಲಾಗುವುದು ಆಸಕ್ತರು ಬಿಜಿಎಸ್‌ಸ್ಟಡಿ ಸೆಂಟರ್, ಶ್ರೀ ಆದಿಚುಂಚನಗಿರಿ ಇಂಗ್ಲಿಷ್ ಶಾಲೆ, ರವೀಂದ್ರನಗರ, ಹಾಸನ, ಮೊ.9738334784, 8050839482 ಸಂಪರ್ಕಿಸಿ.

ಐಟಿಐಗೆ  ಪ್ರವೇಶ
ಹಾಸನ: ಎಸ್ಸೆಸ್ಸೆಲ್ಸಿ  ಅಥವಾ ಜೆಒಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಐ.ಟಿ.ಐ.ನ ಫಿಟ್ಟರ್, ಟರ್ನರ್, ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್(ಇ.ಎಂ), ಎಂ.ಎಂ.ವಿ., ಎಂ.ಆರ್.ಎ.ಸಿ. ವೃತ್ತಿಗಳಿಗೆ ಪ್ರವೇಶ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  ಸಿ.ಟಿ.ಎಸ್. ಯೋಜನೆಯಲ್ಲಿರುವ ತಾಂತ್ರಿಕ ಹಾಗೂ ತಾಂತ್ರಿಕೇತರ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಇಲಾಖಾ ವೆಬ್ ಸೈಟ್ ಮೂಲಕ ಅರ್ಜಿ ಪಡೆದು ಜೂನ್ 5 ರವರೆಗೆ ಸಲ್ಲಿಸಬಹುದು. ವಿದ್ಯಾರ್ಥಿಗಳ ಆಯ್ಕೆಯು ಮೆರಿಟ್ ಹಾಗೂ ರೋಸ್ಟರ್ ಪದ್ಧತಿಗೆ ಅನುಗುಣವಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸಬೇಕೆಂದು ಬೇಲೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಕೋರಿದ್ದಾರೆ.

ಐಟಿಐಗೆ ಪ್ರವೇಶ
ಚನ್ನರಾಯಪಟ್ಟಣ: ಪಟ್ಟಣದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಎಲೆಕ್ಟ್ರಾನಿಕ್-32 ಕೋಪಾ-20 ಸೀಟುಗಳಿವೆ. 10ನೇ ತರಗತಿಯಲ್ಲಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳು ಮೇ 21 ರಿಂದ ಜೂನ್ 5 ರೊಳಗೆ ಆನ್ ಲೈನ್ ಮೂಲಕ  ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು, ಸರ್ಕಾರಿ ಮಹಿಳಾ ಕೈಗಾರಿಕೆ ತರಬೇತಿ ಸಂಸ್ಥೆ, ಚನ್ನರಾಯಪಟ್ಟಣ, ಹಾಸನ ಜಿಲ್ಲೆ 573116 (ದೂರವಾಣಿ ಸಂಖ್ಯೆ 08176-253087, ) ಇವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement