ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಸ್ತಿ ಜಯಂತಿ: ಪೂರ್ವಭಾವಿ ಸಭೆ

Srinivasa Murthy VN
Updated On : 1 Jun 2014, 12:03 pm

ಮಾಲೂರು: ಮಾಸ್ತಿಯಲ್ಲಿ ಜೂ. 6ರಂದು ನಡೆಯಲಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜಯಂತಿ ಅಂಗವಾಗಿ ಶನಿವಾರ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಾಪಂಸದಸ್ಯ ಗೋಪಾಲ್ ಗೌಡ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲವತಿ ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.
ಬೆಂಗಳೂರಿನ ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್‌ನವರು ಮಾಸ್ತಿಯಲ್ಲಿ ಡಾ.ಮಾಸ್ತಿ ಜನ್ಮದಿನ ಕಾರ್ಯಕ್ರಮ ಆಚರಿಸುತ್ತಿದ್ದು, ತಾಲೂಕಿನ ಜನತೆ ಸಹಕಾರ ನೀಡಬೇಕೆಂದು ತಹಸೀಲ್ದಾರ್ ಶಿವುಕುಮಾರ್ ಮಾಡಿದ ಮನವಿ  ಧಿಕ್ಕರಿಸಿ ಮಾತನಾಡಿದ, ಸ್ಥಳೀಯರೇ ಇಲ್ಲದ ಟ್ರಸ್ಟ್‌ನಿಂದ ಮಾಸ್ತಿ ಜಯಂತಿ ಆಚರಿಸುವುದರಲ್ಲಿ ಅರ್ಥವಿಲ್ಲ. ಅದಲ್ಲದೇ ಸ್ಥಳೀಯ ಜನಪ್ರತಿನಿಧಿಗಳಿಲ್ಲದ ಟ್ರಸ್ಟ್ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಯಾಗಿ ತಹಸೀಲ್ದಾರ್ ಸಭೆ ಕರೆದಿರುವುದೇ ಖಂಡನೀಯ ಎಂದರು. ಈ ಸಂಧರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಕನ್ನಡ ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಹಾಗೂ ಟ್ರಸ್ಟ್ ಕಾರ್ಯದರ್ಶಿ ವೆಂಕಟಚಲಪತಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಟ್ರಸ್ಟ್ ಮೂಲಕ ಜನ್ಮದಿನ  ಆಚರಿಸಲಾಗುತ್ತಿದೆ ಎಂಬ ಮಾತನ್ನು ಒಪ್ಪದ ಗೋಪಾಲ್‌ಗೌಡ,
ನಮ್ಮೆಲ್ಲರ ಆಸ್ತಿಯಾದ ಮಾಸ್ತಿ ಅವರ ಜನ್ಮದಿನಾಚರಣೆ ಪೂರ್ವಭಾವಿ ಸಭೆಯನ್ನು ಒಂದು ತಿಂಗಳ ಮುಂಚೆ ಕರೆಯಬೇಕಾಗಿತ್ತು. ತಾಲೂಕಿನ ಜನತೆಯ ಸಹಕಾರ ಕೊರಬೇಕಾಗಿತ್ತು ಕಿಡಿಕಾರಿದರು.
ಮಧ್ಯೆ ಪ್ರವೇಶಿಸಿದ ತಹಸೀಲ್ದಾರ್ ಶಿವಕುಮಾರ್, ಈ ಬಾರಿ ಆಗಿರುವ ತಪ್ಪುಗಳನ್ನು ಮುಂದಿನ ವರ್ಷದಿಂದ ಸರಿಪಡಿಸಿಕೊಂಡು ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾಡಲು ಪ್ರಯತ್ನ ಮಾಡಲಾಗುವುದು. ಈ ಬಾರಿ ಆಹ್ವಾನ ಪತ್ರಿಕೆ ಸೇರಿದಂತೆ ಕಾರ್ಯಕ್ರಮಗಳ ರೂಪು-ರೇಷೆ ಮುಗಿದಿರುವುದರಿಂದ ಎಲ್ಲ ಸಹಕಾರ ನೀಡಬೇಕೆಂದು ಕೋರಿದರು.
ತಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುಂಡಪ್ಪ, ಬಿಇಒ ಸುಬ್ರಮಣ್ಯ, ಮುನಿ ನಾರಾಯಣಪ್ಪ ಇದ್ದರು.

ಹೊಟ್ಟೆನೋವು: ವ್ಯಕ್ತಿ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಬೆಮೆಲ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡೂರು ಕರಪನಹಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್(50) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನಿಗೆ ಆಗಾಗ ಹೊಟ್ಟೆನೋವು ಕಾಣಿಕೊಳ್ಳುತ್ತಿದ್ದು,  ಚಿಕಿತ್ಸೆ ಕೊಡಿಸಿದರೂ ವಾಸಿಯಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಮೆಲ್‌ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement