ಬೇಕಾಗುವ ಪದಾರ್ಥಗಳು.ಕಡಲೆ ಬೇಳೆ - 2 ಕಪ್ಪುದೀನ ಸೊಪ್ಪು - ಸ್ವಲ್ಪಸಬ್ಬಕ್ಕಿ ಸೊಪ್ಪು - ಸ್ವಲ್ಪಈರುಳ್ಳಿ - 6 ಶುಂಠಿ,ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪಉಪ್ಪು - ರುಚಿಗೆ ತಕ್ಕಷ್ಟುತೆಂಗಿನ ತುರಿ - ಸ್ವಲ್ಪಕೊತ್ತಂಬರಿ ಸೊಪ್ಪು - ಸ್ವಲ್ಪಚಕ್ಕೆ - ಸ್ವಲ್ಪಹಸಿಮೆಣಸಿನ ಕಾಯಿ - ಸ್ವಲ್ಪಎಣ್ಣೆ - ಕರಿಯಲು.ಮಾಡುವ ವಿಧಾನ... .ಕಡಲೆಬೇಳೆಯನ್ನು ನೀರಿನಲ್ಲಿ 2-4 ಗಂಟೆಗಳ ಕಾಲ ನೆನೆಹಾಕಬೇಕು.ನಂತರ ನೆಂದ ಕಡಲೆಬೇಳೆಯನ್ನು ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು.ಈ ರುಬ್ಬಿದ ಕಡಲೆಬೇಳೆಗೆ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳು ಪೇಸ್ಟ್, ಚಕ್ಕೆ ಪುಡಿ, ಕೊತ್ತಂಬರಿ ಸೊಪ್ಪು, ಪುದೀನ, ಸಬ್ಬಕ್ಕಿಸೊಪ್ಪು, ಉಪ್ಪು, ತೆಂಗಿನ ತುರಿ ಸೇರಿಸಿ ಚೆನ್ನಾಗಿಮಿಶ್ರಣ ಮಾಡಬೇಕು. ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಬೇಕು.ಎಣ್ಣೆ ಕಾದ ನಂತರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಚಪ್ಪಟೆಯಾಕಾರಕ್ಕೆ ತಟ್ಟೆ ಎಣ್ಣೆಗೆ ಹಾಕಿ ಕೆಂಪಗಾಗುವವರೆಗೆ ಕರಿದರೆ ಕಡಲೆಬೇಳೆ ವಡೆ ತಿನ್ನಲು ಸಿದ್ಧವಾಗುತ್ತದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics