ಕಾಯಿ ಪಪ್ಪಾಯಿ ತೆಗೆದುಕೊಂಡು ಸಿಪ್ಪೆ ಹಾಗೂ ಒಳಗಿರುವ ಬೀಜತೆಗೆದುಕೊಳ್ಳಬೇಕು.
ನಂತರ ಪಪ್ಪಾಯವನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಬೇಕು.
ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ಎರಡು ಬಟ್ಟಲು ನೀರು ಹಾಕಿ ಕಾಯಲು ಬಿಡಬೇಕು.ನೀರು ಕಾದ ನಂತರ ಸಣ್ಣದಾಗಿ ಕತ್ತರಿಸಿಕೊಂಡ ಪಪ್ಪಾಯಿಯನ್ನು ಹಾಕಿ 5-10 ನಿಮಿಷಬೇಯಿಸಿಕೊಳ್ಳಬೇಕು.
ಬೆಂದ ಪಪ್ಪಾಯಿ ಚೂರುಗಳನ್ನು ನೀರು ಸೋಸುವ ಪಾತ್ರೆಗೆ ಹಾಕಿ ನೀರು ತೆಗೆಯಬೇಕು.
ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು 1 ಬಟ್ಟಲು ನೀರು ಹಾಗೂ ಸಕ್ಕರೆ ಹಾಕಿ ಪಾಕಮಾಡಿಕೊಳ್ಳಬೇಕು.
ಈ ಸಕ್ಕರೆ ಪಾಕಕ್ಕೆ ಬೆಂದ ಪಪ್ಪಾಯಿ ಚೂರುಗಳನ್ನು ಹಾಕಿ 2 ನಿಮಿಷ ಬೇಯಿಸಿ. ತಣ್ಣಗಾಗಲುಬಿಡಬೇಕು.
ಸಣ್ಣಗಾದ ನಂತರ ಪಪ್ಪಾಯಿ ಚೂರುಗಳನ್ನು ತೆಗೆದು ಒಂದು ಬಟ್ಟಲಿಗೆ ಹಾಕಿಕೊಂಡು. ಫುಡ್ ಕಲರಹಾಕಿ ಚಮಚದಲ್ಲಿ ಮಿಶ್ರಣ ಮಾಡಬೇಕು.
ಮಿಶ್ರಣವಾದ ನಂತರ 48 ಗಂಟೆಗಳ ಕಾಲ ಚೆನ್ನಾಗಿ ಆರಲು ಬಿಟ್ಟರೆಟೂಟಿ ಫ್ರೂಟಿ ತಯಾರಾಗುತ್ತದೆ.