ಬೇಕಾಗುವ ಪದಾರ್ಥಗಳು.ಒಂದು ದೊಡ್ಡ ಲೋಟದಲ್ಲಿ ಅವಲಕ್ಕಿಒಂದು ನಿಂಬೆ ಹಣ್ಣಿನಷ್ಟು ಹುಣಿಸೆ ಹಣ್ಣುಸ್ವಲ್ಪ ಹುಳಿಸಾರು ಪುಡಿಉಪ್ಪುಎಣ್ಣೆಕಡಲೆ ಕಾಯಿ ಬೀಜಕಡಲೆಬೇಳೆಕೊಬ್ಬರಿ ತುರಿಬೆಲ್ಲ ಸ್ವಲ್ಪಕರಿಬೇವುಬ್ಯಾಡಗಿ ಮೆಣಸಿನಕಾಯಿ -3ಸಾಸಿವೆಅರಿಶಿಣಹಿಂಗು.ಮಾಡುವ ವಿಧಾನ....ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ಪುಡಿ ಮಾಡಿಕೊಳ್ಳಬೇಕುಹುಣಸೆ ಹಣ್ಣನ್ನು ನೆನೆಸಿ ರಸ ತೆಗೆದುಕೊಳ್ಳಬೇಕುನಂತರ ಆ ರಸಕ್ಕೆ ಹುಳಿ ಸಾರು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲ ಹಾಕಿ ಮಿಶ್ರಣ ಮಾಡಿತೊಳೆದ ಅವಲಕ್ಕಿಯನ್ನು ಮಿಶ್ರಣಕ್ಕೆ ಹಾಕಿ ಕಲೆಸಿಡಿ15 ನಿಮಿಷ ನೆನೆಸಿಟ್ಟುಕೊಳ್ಳಿನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿಅದಕ್ಕೆ ಸಾಸಿವೆ, ಕರಿಬೇವು,ಬ್ಯಾಡಗಿ ಮೆಣಸಿನಕಾಯಿ, ಕಡಲೆಬೇಳೆ, ಕಡಲೆ ಬೀಜ ಹಾಕಿ ಫ್ರೈ ಮಾಡಿಕೊಳ್ಳಿನಂತರ ಅದಕ್ಕೆ ಅರಿಶಿಣ ತುರಿದ ಕೊಬ್ಬರಿ, ಹಿಂಗು ಹಾಕಿ, ಸ್ವಲ್ಪ ಬಾಡಿದ ನಂತರ ಅದಕ್ಕೆ ನೆನೆಸಿಟ್ಟ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಇರುವಾಗಲೇ ಬಡಿಸಿ.Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics