ಪನ್ನೀರ್ ಕಬಾಬ್
ಪನ್ನೀರ್ ಕಬಾಬ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಪನ್ನೀರ್ -125 ಗ್ರಾಂ
- ಮೊಸರು - 1/2 ಬಟ್ಟಲು
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
- ಚಾಟ್ ಮಸಾಲಾ ಪುಡಿ - 1/2 ಚಮಚ
- ಗರಂ ಮಸಾಲಾ ಪುಡಿ - 3/4 ಚಮಚ
- ಕೆಂಪು ಖಾರದ ಪುಡಿ - 1 1/2 ಚಮಚ
- ಹಸಿ ಮೆಣಸಿನಕಾಯಿ ಪೇಸ್ಟ್ - 1/2 ಚಮಚ
- ಜೀರಿಗೆ ಪುಡಿ - 1/4 ಚಮಚ
- ದನಿಯಾ ಪುಡಿ - 1/4 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
- ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಚಾಟ್ ಮಸಾಲಾ ಪುಡಿ, ಖಾರದ ಪುಡಿ, ಗರಂ ಮಸಾಲಾ ಪುಡಿ, ಹಸಿಮೆಣಸಿನ ಕಾಯಿ ಪೇಸ್ಟ್, ಜೀರಿಗೆ ಪುಡಿ, ದನಿಯಾ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಗಿ ಚೆನ್ನಾಗಿ ಮಿಶ್ರಣ ಮಾಡಿದ
- ಇದಕ್ಕೆ ಕತ್ತರಿಸಿಕೊಂಡ ಪನ್ನೀರ್ ಪೀಸ್ ಗಳನ್ನು ಹಾಗಿ ಮಸಾಲೆ ಚೆನ್ನಾಗಿ ಅಂಟುವ ಹಾಗೆ ಮಿಶ್ರಣ ಮಾಡಿ.
- ನಂತರ ಮಸಾಲೆ ಹಚ್ಚಿದ ಪನ್ನೀರ್ ನ್ನು ತೆಗೆದುಕೊಂಡು ಲಾಕ್ ಮಾಡುವ ಕವರ್ ನಲ್ಲಿ ಹಾಕಿ ಗಾಳಿ ಹೋಗದಂತೆ ಲಾಕ್ ಮಾಡಿ ಅದನ್ನು ಫ್ರಿಡ್ಜ್ ನಲ್ಲಿ 2 ರಿಂದ 4 ಗಂಟೆಗಳ ಇಡಬೇಕು.
- ಒಲೆಯ ಮೇಲೆ ಪ್ಯಾನ್ ವೊಂದನ್ನು ಇಟ್ಟು ಮಧ್ಯಮ ಉರಿಯಲ್ಲಿ ಕಾಯಲು ಬಿಡಿ
- 2-4 ಗಂಟೆಗಳ ನಂತರ ಪನ್ನೀರ್ ನ್ನು ಫ್ರಿಡ್ಜ್ ನಿಂದ ಹೊರ ತೆಗೆದು 5 ನಿಮಿಷ ಬಿಡಿ.
- ನಂತರ ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಒಂದೊಂದೇ ಪನ್ನೀರ್ ಪೀಸ್ ನ್ನು ಇಟ್ಟು ಚಿನ್ನದ ಬಣ್ಣ ಬರುವವರೆಗೆ ಸುಟ್ಟರೆ ರುಚಿಕರವಾದ ಪನ್ನೀರ್ ಕಬಾಬ್ ಸವಿಯಲು ಸಿದ್ಧ.