ಹೆಸರುಬೇಳೆ, ರವೆ ಸೇರಿಸಿ ಮಾಡಿ ಬಿಸಿ ಬಿಸಿ ಖಾರ ಪೊಂಗಲ್; ತೆಂಗಿನಕಾಯಿ ಚಟ್ನಿ ಜೊತೆ ಸೂಪರ್ ಕಾಂಬಿನೇಷನ್..!

ಖಾರ ರವೆ ಪೊಂಗಲ್ ದಕ್ಷಿಣ ಭಾರತದ ರುಚಿಕರವಾದ ಉಪಾಹಾರಗಳಲ್ಲಿ ಒಂದು. ಅಕ್ಕಿ ಮತ್ತು ಹೆಸರುಬೇಳೆಯ ಬದಲಿಗೆ ರವೆ ಬಳಸಿ ತಯಾರಿಸುವ ಈ ಪೊಂಗಲ್ ಮೃದುವಾಗಿ, ಘಮಘಮಿಸುವ ಒಗ್ಗರಣೆಯೊಂದಿಗೆ ತುಂಬಾ ರುಚಿಯಾಗಿರುತ್ತದೆ. ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದ ಖಾರ ರವೆ ಪೊಂಗಲ್ ಮಾಡುವ ವಿಧಾನ ಇಲ್ಲಿದೆ...
ಬೇಕಾಗುವ ಪದಾರ್ಥಗಳು...
ರವೆ – 1 ಕಪ್
ಹೆಸರುಬೇಳೆ – ½ ಕಪ್
ನೀರು – 4 ಕಪ್
ಹಸಿಮೆಣಸಿನಕಾಯಿ – 2
ಶುಂಠಿ – 1 ಇಂಚು
ಕಾಳುಮೆಣಸು – 1 ಚಮಚ
ಜೀರಿಗೆ – 1 ಟೀ ಚಮಚ
ಗೋಡಂಬಿ – 10
ಕರಿಬೇವು – ಸ್ವಲ್ಪ
ತುಪ್ಪ – 2 ಟೇಬಲ್ ಚಮಚ
ಎಣ್ಣೆ – 1 ಟೇಬಲ್ ಚಮಚ
ಅರಿಶಿನ – ¼ ಟೀ ಚಮಚ
ಇಂಗು – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ...
ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಹಾಕಿ, ಎರಡು ಕಪ್ ನೀರು ಸೇರಿಸಿ 3-4 ವಿಶಲ್ ಬರುವವರೆಗೆ ಬೇಯಿಸಿಕೊಳ್ಳಿ. ಬೇಳೆ ಮೆತ್ತಗಾಗಿರಬೇಕು.
ಒಂದು ಬಾಣಲೆಗೆ ರವೆ ಹಾಕಿ ಮಧ್ಯಮ ಉರಿಯಲ್ಲಿ ಹದವಾಗಿ ಹುರಿದುಕೊಳ್ಳಿ. ರವೆ ಬಣ್ಣ ಬದಲಾಗದಂತೆ ನೋಡಿಕೊಳ್ಳಿ. ನಂತರ ಅದನ್ನು ಪ್ರತ್ಯೇಕವಾಗಿ ತೆಗೆದಿಡಿ.
ಈಗ ಪಾತ್ರೆಯಲ್ಲಿ ಎಣ್ಣೆ ಮತ್ತು ತುಪ್ಪ ಬಿಸಿ ಮಾಡಿ. ಅದಕ್ಕೆ ಗೋಡಂಬಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ನಂತರ ಜೀರಿಗೆ, ಕಾಳುಮೆಣಸು, ಇಂಗು ಮತ್ತು ಕರಿಬೇವು ಸೇರಿಸಿ. ಸಣ್ಣಗೆ ಹೆಚ್ಚಿದ ಶುಂಠಿ ಹಾಗೂ ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ.
ಇದಕ್ಕೆ ಅರಿಶಿನ, ಬೇಯಿಸಿದ ಹೆಸರುಬೇಳೆ, ಉಳಿದ ಎರಡು ಕಪ್ ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ.
ನೀರು ಕುದಿಯಲು ಆರಂಭಿಸಿದಾಗ ಹುರಿದ ರವೆಯನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ನಿರಂತರವಾಗಿ ಕೈಯಾಡಿಸಿ. ಗಂಟುಗಳಾಗದಂತೆ ನೋಡಿಕೊಳ್ಳಿ.
ಕಡಿಮೆ ಉರಿಯಲ್ಲಿ ಮುಚ್ಚಳ ಮುಚ್ಚಿ 5-7 ನಿಮಿಷ ಬೇಯಿಸಿ. ರವೆ ನೀರನ್ನು ಹೀರಿಕೊಂಡು ಮೃದುವಾದಾಗ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಕಲಸಿ.ಇದೀಗ ರುಚಿಕರವಾದ ಖಾರ ರವೆ ಪೊಂಗಲ್ ಸವಿಯಲು ಸಿದ್ಧ.
ಟಿಪ್ಸ್..
ಪೊಂಗಲ್ ತುಂಬಾ ಗಟ್ಟಿಯಾಗದಂತೆ ನೋಡಿಕೊಳ್ಳಿ.
ಹೆಸರುಬೇಳೆ ಮತ್ತು ರವೆ ಎರಡೂ ಚೆನ್ನಾಗಿ ಮೆತ್ತಗಾದರೆ ರುಚಿ ಹೆಚ್ಚುತ್ತದೆ.
ಬಡಿಸುವಾಗ ಸ್ವಲ್ಪ ತುಪ್ಪ ಸೇರಿಸಿದರೆ ಇನ್ನಷ್ಟು ರುಚಿಯಾಗಿರುತ್ತದೆ.
ತುಂಬಾ ಗಟ್ಟಿಯಾಗಿದೆ ಎಂದೆನಿಸಿದರೆ ಕಾಯಿ ಹಾಲು ಅಥವಾ ಕಾಯಿಸಿ ಆರಿಸಿದ ಹಾಲನ್ನೂ ಕೂಡ ಸೇರಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



