ಅಡುಗೆ

ಆರೋಗ್ಯಕ್ಕೂ ಒಳ್ಳೆಯದು, ರುಚಿಯೂ ಅದ್ಭುತ; ಮನೆಯಲ್ಲೇ ಮಾಡಿ ಸ್ವೀಟ್ ಕಾರ್ನ್ ಕೋಸಂಬರಿ..!

ಆರೋಗ್ಯಕ್ಕೂ ಒಳ್ಳೆಯದು, ರುಚಿಯೂ ಅದ್ಭುತ; ಮನೆಯಲ್ಲೇ ಮಾಡಿ ಸ್ವೀಟ್ ಕಾರ್ನ್ ಕೋಸಂಬರಿ..!
ಸ್ವೀಟ್ ಕಾರ್ನ್ ಕೋಸಂಬರಿ
Published On :

ಸ್ವೀಟ್ ಕಾರ್ನ್ ಕೋಸಂಬರಿ ರುಚಿಕರವಾಗಿರುವುದರ ಜೊತೆಗೆ ತಯಾರಿಸಲು ತುಂಬಾ ಸುಲಭ. ಸ್ವೀಟ್ ಕಾರ್ನ್, ಸೌತೆಕಾಯಿ, ಕ್ಯಾರೆಟ್ ಮತ್ತು ತೆಂಗಿನಕಾಯಿ ಸೇರಿಸಿ ಮಾಡುವ ಈ ಕೋಸಂಬರಿಯನ್ನು ಊಟದ ಜೊತೆಗೆ ಅಥವಾ ಸಂಜೆ ಲಘು ಆಹಾರವಾಗಿಯೂ ಸವಿಯಬಹುದು. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ಸಲಾಡ್ ಮಕ್ಕಳಿಗೂ ಇಷ್ಟವಾಗುತ್ತದೆ.

ಬೇಕಾಗುವ ಪದಾರ್ಥಗಳು...

  • ಸ್ವೀಟ್ ಕಾರ್ನ್ – 1 ಕಪ್

  • ಸೌತೆಕಾಯಿ – 1

  • ಕ್ಯಾರೆಟ್ – 1

  • ಈರುಳ್ಳಿ-1

  • ಹಸಿ ಮೆಣಸಿನಕಾಯಿ – 1

  • ತುರಿದ ತೆಂಗಿನಕಾಯಿ – ¼ ಕಪ್

  • ಕಾಂಗ್ರೆಸ್ ಕಡಲೆಬೀಜ- ಸ್ವಲ್ಪ

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ನಿಂಬೆಹಣ್ಣಿನ ರಸ – 1 ಟೀ ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು

  • ಎಣ್ಣೆ – 1 ಟೀ ಚಮಚ

  • ಸಾಸಿವೆ – ½ ಟೀ ಚಮಚ

  • ಉದ್ದಿನಬೇಳೆ – ½ ಟೀ ಚಮಚ

  • ಜೀರಿಗೆ – ¼ ಟೀ ಚಮಚ

  • ಕರಿಬೇವು – ಸ್ವಲ್ಪ

ಮಾಡುವ ವಿಧಾನ...

  • ಮೊದಲು ಸ್ವೀಟ್ ಕಾರ್ನ್ ಕಾಳುಗಳನ್ನು ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ 5-7 ನಿಮಿಷ ಬೇಯಿಸಿಕೊಳ್ಳಿ. ನಂತರ ನೀರನ್ನು ಬಸಿದು ತಣ್ಣಗಾಗಲು ಬಿಡಿ.

  • ಸೌತೆಕಾಯಿ ಮತ್ತು ಕ್ಯಾರೆಟ್ ಅನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿಯನ್ನು ಕೂಡ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.

  • ಒಂದು ದೊಡ್ಡ ಪಾತ್ರೆಯಲ್ಲಿ ಬೇಯಿಸಿದ ಸ್ವೀಟ್ ಕಾರ್ನ್, ಹೆಚ್ಚಿದ ಸೌತೆಕಾಯಿ, ಕ್ಯಾರೆಟ್ ಮತ್ತು ಹಸಿಮೆಣಸಿನಕಾಯಿ ಹಾಕಿ.

  • ಇದಕ್ಕೆ ತುರಿದ ತೆಂಗಿನಕಾಯಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕಾಂಗ್ರೆಸ್ ಕಡಲೆಬೀಜ, ಉಪ್ಪು ಮತ್ತು ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

  • ಈಗ ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಜೀರಿಗೆ, ಇಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ.

  • ಈ ಒಗ್ಗರಣೆಯನ್ನು ಕೋಸಂಬರಿಗೆ ಸೇರಿಸಿ ಚೆನ್ನಾಗಿ ಕಲಸಿ. ಇದೀಗ ರುಚಿಕರವಾದ ಸ್ವೀಟ್ ಕಾರ್ನ್ ಕೋಸಂಬರಿ ಸವಿಯಲು ಸಿದ್ಧ.

ಟಿಪ್ಸ್...

  • ಕೋಸಂಬರಿ ತಯಾರಿಸಿದ ತಕ್ಷಣ ಸವಿದರೆ ಹೆಚ್ಚು ರುಚಿಯಾಗಿರುತ್ತದೆ.

  • ಬೇಕಿದ್ದರೆ ದಾಳಿಂಬೆ ಕಾಳುಗಳನ್ನು ಸೇರಿಸಬಹುದು.

  • ಇದರಿಂದ ಕೋಸಂಬರಿಗೆ ಸಿಹಿ ಮತ್ತು ಆಕರ್ಷಕ ಬಣ್ಣ ಎರಡೂ ಸಿಗುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.