ಆಂಧ್ರಶೈಲಿ ಪರಡಿ ಪಾಯಸ
ಆಂಧ್ರಶೈಲಿ ಪರಡಿ ಪಾಯಸ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು - 1 ಬಟ್ಟಲು
- ನೀರು - ಸ್ವಲ್ಪ
- ಹಾಲು - 2 ಬಟ್ಟಲು
- ಸಕ್ಕರೆ - 1 ಬಟ್ಟಲು
- ಪರಡಿ - 1 ಬಟ್ಟಲು
- ದ್ರಾಕ್ಷಿ - ಸ್ವಲ್ಪ
- ಗೋಡಂಬಿ - ಸ್ವಲ್ಪ
- ಏಲಕ್ಕಿ ಪುಡಿ - ಸ್ವಲ್ಪ
- ತುಪ್ಪ -ಸ್ವಲ್ಪ
ಪರಡಿ ಮಾಡುವ ವಿಧಾನ...
- ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ 1 ಬಟ್ಟಲು ಮೈದಾ ಹಾಗೂ ನೀರು ಹಾಕಿ ಚಪಾತಿ ಹಿಟ್ಟಿನಂತೆ ಮೃದುವಾಗಿ ಹಿಟ್ಟನ್ನು ಮಾಡಿಕೊಳ್ಳಬೇಕು.
- ಕೈಗೆ ಎಣ್ಣೆ ಹಚ್ಚಿಕೊಂಡು ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣದಾಗಿ ಮಾಡಿ ಶಾವಿಗೆ ರೀತಿಯಲ್ಲಿ ಮಾಡಿಕೊಳ್ಳಬೇಕು. ಇದನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿದರೆ. ಪರಡಿ ತಯಾರಾಗುತ್ತದೆ.
ಪರಡಿ ಪಾಯಸ ಮಾಡುವ ವಿಧಾನ
- ಪಾತ್ರೆಯೊಂದನ್ನು ತೆಗೆದುಕೊಂಡು ಹಾಲನ್ನು ಚೆನ್ನಾಗಿ ಕಾಯಿಸಬೇಕು. ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ತುಪ್ಪವನ್ನು ಹಾಗಿ ಪರಡಿಯನ್ನು ಕೆಂಪಗೆ ಹುರಿದುಕೊಳ್ಳಬೇಕು.
- ಇದೇ ಬಾಣಲೆಯಲ್ಲಿಯೇ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. ಚೆನ್ನಾಗಿ ಕಾದ ಹಾಲಿಗೆ ಸಕ್ಕರೆ ಹಾಕಬೇಕು. ನಂತರ ಪರಡಿಯನ್ನು ಹಾಕಿ 5-6 ನಿಮಿಷ ಬೇಯಲು ಬಿಡಬೇಕು. ಇದಕ್ಕೆ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಗೂ ಸ್ವಲ್ಪ ತುಪ್ಪ ಹಾಕಿದರೆ ರುಚಿಕರವಾದ ಪರಡಿ ಪಾಯಸ ಸವಿಯಲು ಸಿದ್ಧ.