ಮೊದಲು ಬಾದಾಮಿ ಹಾಗೂ ಗೋಡಂಬಿಯನ್ನು ಎರಡು ಗಂಟೆಗಳ ಕಾಲ ಹಾಲಿನಲ್ಲಿ ನೆನೆಸಿಕೊಳ್ಳಬೇಕು
ನಂತರ ಮಿಕ್ಸಿ ಜಾರ್ ಗೆ ನೆನೆಸಿದ ಬಾದಾಮಿ ಹಾಗೂ ಗೋಡಂಬಿಯನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು.
ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಸ್ವಲ್ಪ ತುಪ್ಪವನ್ನು ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆ ಹುರಿದಿಟ್ಟುಕೊಳ್ಳಬೇಕು.
ಇದೇ ಬಾಣಲೆಗೆ ಮತ್ತೆ 2 ಚಮಚ ತುಪ್ಪ ವನ್ನು ಹಾಕಿ ಬಾದಾಮಿ ಹಾಗೂ ಗೋಡಂಬಿ ಪೇಸ್ಟ್ ಹಾಕಬೇಕು. 2 ನಿಮಿಷದ ನಂತರ ಸಕ್ಕರೆಯನ್ನು ಹಾಕಿ ಕೈಯಾಡಿಸುತ್ತಿರಬೇಕು. ಬಾಣಲೆಯ ತಳ ಬಿಡುವವರೆಗೆ ಕೈಯಾಡಿಸುತ್ತಿರಬೇಕು. ನಂತರ ಉಳಿದ ತುಪ್ಪ, ಏಲಕ್ಕಿ ಪುಡಿ, ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ, ಕೇಸರಿ, ಹಾಕಿ ಅಲಂಕರಿಸಿದರೆ ಗೋಡಂಬಿ-ಬಾದಾಮಿ ಹಲ್ವ ಸವಿಯಲು ಸಿದ್ಧ.