ಬೇಕಾಗುವ ಪದಾರ್ಥಗಳು.ಹಾಗಲಕಾಯಿ - 3ಉದ್ದಿನ ಬೇಳೆ - 1 ಚಮಚಮೆಂತ್ಯೆ - ಮುಕ್ಕಾಲು ಚಮಚಒಣ ಕೊಬ್ಬರಿ - 1 ಬಟ್ಟಲುಒಣಗಿನ ಮೆಣಸಿನಕಾಯಿ - 10-12ಹುಣಸೆಹಣ್ಣು - 1 ನಿಂಬೆ ಗಾತ್ರದಷ್ಟುಬೆಲ್ಲ - ಸ್ವಲ್ಪಉಪ್ಪು- ರುಚಿಗೆ ತಕ್ಕಷ್ಟುಎಳ್ಳು - 2 ಚಮಚ.ಮಾಡುವ ವಿಧಾನ....ಉದ್ದಿನಬೇಳೆ, ಮೆಂತ್ಯೆ, ಎಳ್ಳು, ಒಣಕೊಬ್ಬರಿ, ಒಣಗಿದ ಮೆಣಸಿನಕಾಯಿ ಎಲ್ಲವನ್ನು ಬೇರೆಬೇರೆಯಾಗಿ ಹುರಿದು ಮಿಕ್ಸಿ ಜಾರ್ ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಹಾಗಲಕಾಯಿಯನ್ನು ತೊಳೆದು, ಒರೆಸಿ, ಬೀಜ ತೆಗೆದು ಸಣ್ಣ ಹೋಳುಗಳಾಗಿ ಹೆಚ್ಚಿ ಎಣ್ಣೆಯಲ್ಲಿ ಕರಿದುಕೊಳ್ಳಬೇಕು. ನಂತರ ಕರಿದ ಹಾಗಲಕಾಯಿ, ಹುಣಸೆರಸ, ಪುಡಿ ಮಾಡಿಕೊಂಡ ಮಿಶ್ರಣ, ಉಪ್ಪು, ಚಿಟಿಕೆ ಅರಿಶಿನ, ಇಂಗು ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. 1 ಚಮಚ ಎಣ್ಣೆ ಕಾಯಿಸಿ, ಸಾಸಿಸವೆ ಹಾಕಿ ಒಗ್ಗರಣೆ ಮಾಡಿದರೆ ಗೊಜ್ಜು ತಯಾರಾಗುತ್ತದೆ. .Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics