ಶುಂಠಿ ಹಾಗೂ ಪುದೀನಾವನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು.
ಒಲೆಯ ಮೇಲೆ ಕುಕ್ಕರ್ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದನಂತರ ಚಕ್ಕೆ ಲವಂಗ ಪುಡಿ ಮಾಡಿ ಹಾಕಬೇಕು.
ನಂತರ ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಇದಕ್ಕೆ ಕತ್ತರಿಸಿದ ಪನ್ನೀರ್'ನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ನಂತರ ಬಟಾಣಿ ಹಾಕಿ. ಪುದೀನಾ ಪೇಸ್ಟ್ ಹಾಕಿ ಮತ್ತೆ 2 ನಿಮಿಷ ಹುರಿದುಕೊಳ್ಳಬೇಕು.
ನಂತರ ತೊಳೆದ ಅಕ್ಕಿ ಹಾಗೂ ಉಪ್ಪು, ಅಳತೆ ನೀರು ಸೇರಿಸಿ ಕುಕ್ಕರಿನ ಮುಚ್ಚಳವನ್ನು ಹಾಕಿ 2 ವಿಶಲ್ ಕೂಗಿಸಿದರೆ ಪುದೀನಾ ಪನ್ನೀರ್ ಪಲಾವ್ ಸವಿಯಲು ಸಿದ್ಧವಾಗುತ್ತದೆ.