ಕೀಮಾ ಉಂಡೆಗೆ ಬೇಕಾಗುವ ಪದಾರ್ಥಗಳು...
- ಕೀಮಾ (ತುಂಡಾಗಿ ಕತ್ತರಿಸಿದ ಮಾಂಸ) - ಅರ್ಧ ಕೆಜಿ
- ಕೊಬ್ಬರಿ - ಅರ್ಧ ಹೋಳು
- ಚಕ್ಕೆ - ಸ್ವಲ್ಪ
- ಲವಂಗ - ಸ್ವಲ್ಪ
- ಕಾಳು ಮೆಣಸು - ಸ್ವಲ್ಪ
- ಏಲಕ್ಕಿ - 1
- ಗಸಗಸೆ - ಸ್ವಲ್ಪ
- ದನಿಯಾ ಪುಡಿ - ಅರ್ಧ ಚಮಚ
- ಶುಂಠಿ - ಸ್ವಲ್ಪ
- ಅಚ್ಚ ಖಾರದ ಪುಡಿ - 1 ಚಮಚ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಬೆಳ್ಳುಳ್ಳು - 10-15 ಎಸಳು
- ಮೊಟ್ಟೆ - 2 ಎರಡು
- ಉಪ್ಪು - ರುಚಿಗೆ ತಕ್ಕಷ್ಟು
- ಹುರಿಗಡಲೆ - ಸ್ವಲ್ಪ
ಮಸಾಲೆಗೆ ಬೇಕಾಗುವ ಪದಾರ್ಥಗಳು...
- ತೆಂಗಿನ ತುರಿ - ಅರ್ಧ ಬಟ್ಟಲು
- ಚಕ್ಕೆ - ಸ್ವಲ್ಪ
- ಲವಂಗ - ಸ್ವಲ್ಪ
- ಏಲಕ್ಕಿ - 1
- ಗಸಗಸೆ - ಸ್ವಲ್ಪ
- ದನಿಯಾ ಪುಡಿ - 1 ಚಮಚ
- ಶುಂಠಿ - ಸ್ವಲ್ಪ
- ಅಚ್ಚ ಖಾರದ ಪುಡಿ - 2 ಚಮಚ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಬೆಳ್ಳುಳ್ಳಿ - 10-15 ಎಸಳು
- ಈರುಳ್ಳಿ - 2
- ಟೊಮೆಟೋ - 1
ಮಾಡುವ ವಿಧಾನ...
ಕೀಮಾ ಉಂಡೆ ಮಾಡಿಕೊಳ್ಳಲು....
- ಮೊದಲು ಮಿಕ್ಸಿ ಜಾರ್ ತೆಗೆದುಕೊಂಡು ಹುರಿಗಡಲೆಯನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು. ಪುಡಿಯನ್ನು ಪಾತ್ರೆಯೊಂದಕ್ಕೆ ಹಾಕಿಟ್ಟುಕೊಳ್ಳಬೇಕು.
- ಇದೇ ಜಾರ್ ಗೆ ಕೊಬ್ಬರಿ, ಬೆಳ್ಳುಳ್ಳು ಎಸಳು, ಚಕ್ಕೆ ಲವಂಗ, ಗಸಗಸೆ, ಕಾಳು ಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ದನಿಯಾ ಪುಡಿ ಹಾಕಿ ನೀರು ಹಾಕದೆ ರುಬ್ಬಿಕೊಳ್ಳಬೇಕು. ರುಬ್ಬಿಕೊಳ್ಳುವಾಗ ಮೊಟ್ಟೆಯನ್ನು ಹಾಕಿ ರುಬ್ಬಿ ಕೊಳ್ಳಬೇಕು.
- ನಂತರ ಜಾರ್ ನಲ್ಲಿ ಕೀಮಾವನ್ನು ಹಾಕಿ 1-2 ಸುತ್ತು ಸ್ವಲ್ಪ ರುಬ್ಬಿಕೊಳ್ಳಬೇಕು.
- ರುಬ್ಬಿಕೊಂಡ ಮಸಾಲೆ, ಕೀಮಾ, ಉಪ್ಪು ಹಾಗೂ ಹುರಿಗಡಲೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.
ಕೀಮಾ ಮಸಾಲೆ...
- ತೆಂಗಿನ ತುರಿ, ಬೆಳ್ಳುಳ್ಳಿ ಎಸಳು, ಈರುಳ್ಳಿ, ಚಕ್ಕೆ ಲವಂಗ, ಗಸಗಸೆ, ಶುಂಠಿ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ದನಿಯಾ ಪುಡಿ, ಟೊಮೆಟೋ ಹಾಕಿ ನೀರು ಹಾಕಿ ರುಬ್ಬಿಕೊಳ್ಳಬೇಕು.
- ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಕತ್ತರಿಸಿಕೊಂಡ ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ನಂತರ ಇದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಅಗತ್ಯವಿದ್ದಷ್ಟು ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಸಾಲೆ ಚೆನ್ನಾಗಿ ಬೇಯಲು ಬಿಡಬೇಕು.
- 15-20 ನಿಮಿಷಗಳ ನಂತರ ಈ ಹಿಂದೆಯೇ ಮಾಡಿಟ್ಟುಕೊಂಡ ಕೀಮಾ ಉಂಡೆಗಳನ್ನು ಹಾಕಿ ಮತ್ತೆ 20 ನಿಮಿಷಗಳ ಕಾಲ ಬೇಯಿಸಿದರೆ ರುಚಿಕರ ಕೀಮಾ ಮಸಾಲೆ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics