ಮೊದಲು ಮಿಕ್ಸಿ ಜಾರ್ ತೆಗೆದುಕೊಂಡು ಹುರಿಗಡಲೆಯನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು. ಪುಡಿಯನ್ನು ಪಾತ್ರೆಯೊಂದಕ್ಕೆ ಹಾಕಿಟ್ಟುಕೊಳ್ಳಬೇಕು.
ಇದೇ ಜಾರ್ ಗೆ ಕೊಬ್ಬರಿ, ಬೆಳ್ಳುಳ್ಳು ಎಸಳು, ಚಕ್ಕೆ ಲವಂಗ, ಗಸಗಸೆ, ಕಾಳು ಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ದನಿಯಾ ಪುಡಿ ಹಾಕಿ ನೀರು ಹಾಕದೆ ರುಬ್ಬಿಕೊಳ್ಳಬೇಕು. ರುಬ್ಬಿಕೊಳ್ಳುವಾಗ ಮೊಟ್ಟೆಯನ್ನು ಹಾಕಿ ರುಬ್ಬಿ ಕೊಳ್ಳಬೇಕು.
ನಂತರ ಜಾರ್ ನಲ್ಲಿ ಕೀಮಾವನ್ನು ಹಾಕಿ 1-2 ಸುತ್ತು ಸ್ವಲ್ಪ ರುಬ್ಬಿಕೊಳ್ಳಬೇಕು.
ರುಬ್ಬಿಕೊಂಡ ಮಸಾಲೆ, ಕೀಮಾ, ಉಪ್ಪು ಹಾಗೂ ಹುರಿಗಡಲೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು. ನಂತರ ಕೀಮಾ ಮಸಾಲೆಯನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ತಟ್ಟಿ ಎಣ್ಣೆಗೆ ಹಾಕಿ ಕೆಂಪಗಾಗುವವರೆಗೆ ಖರಿದರೆ ರುಚಿಕರ ಕೀಮಾ ವಡೆ ಸವಿಯಲು ಸಿದ್ಧವಾಗುತ್ತದೆ.