ಆಲೂಗಡ್ಡೆಯನ್ನು ತೊಳೆದು ಕುಕ್ಕರಿಗೆ ಹಾಗೂ 2 ಕೂಗು ಕೂಗಿಸಿಕೊಳ್ಳಬೇಕು. ನಂತರ ಬೆಂದ ಆಲೂಗಡ್ಡೆಯ ಮೇಲಿರುವ ಸಿಪ್ಪೆ ತೆಗೆದು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು.
ಮಿಕ್ಸಿ ಜಾರ್ ಗೆ ಚಿಲ್ಲಿ ಫ್ಲೇಕ್ಸ್, ಹುರಿದ ಜಾರಿಗೆ, ಕಪ್ಪು ಮೆಣಸಿನ ಪುಡಿ, ಬೆಳ್ಳುಳ್ಳಿ ಹಾಗೂ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.
ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಆಲೂಗಡ್ಡೆ ಹಾಕಿ 4-5 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಬೇಕು. ನಂತರ ಮಾವಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದಕ್ಕೆ 1 ಬಟ್ಟಲು ನೀರು ಹಾಕಿ ಸಾಧಾರಣ ಉರಿಯಲ್ಲಿ ಬೇಯಿಸಿಕೊಂಡು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸ್ಪೆಷಲ್ ಬೇಬಿ ಆಲೂ ಫ್ರೈ ಸವಿಯಲು ಸಿದ್ಧವಾಗುತ್ತದೆ.