ಒಲೆಯ ಮೇಲೆ ಬಾಣಲೆ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಕತ್ತರಿಸಿಕೊಂಡ ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಉರಿದುಕೊಳ್ಳಬೇಕು. ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡ ಬೆಳ್ಳುಳ್ಳಿಯನ್ನು ಹಾಕಬೇಕು.
ನಂತರ ಮೊಟ್ಟೆಯನ್ನು ಒಡೆದು ಹಾಕಿ ಬಾಣಲೆಗೆ ಅಂಟದಂತೆ ಚೆನ್ನಾಗಿ ಹುರಿದುಕೊಳ್ಳಬೇಕು.
ನಂತರ ಇದಕ್ಕೆ ಉಪ್ಪು, ಕಪ್ಪು ಮೆಣಸಿನ ಪುಡಿ, ಅರಿಶಿಣದ ಪುಡಿ, ಖಾರದ ಪುಡಿ, ಕತ್ತರಿಸಿಕೊಂಡ ಹಸಿ ಮೆಣಸಿನ ಕಾಯಿ, ಕತ್ತರಿಸಿಕೊಂಡ ಟೊಮೆಟೋ ಹಾಕಿ 5 ನಿಮಿಷಗಳ ಹುರಿದುಕೊಳ್ಳಬೇಕು.
ಮಿಶ್ರಣವಾಗುತ್ತಿದ್ದಂತೆ ಇದಕ್ಕೆ ಈಗಾಗಲೇ ತಯಾರು ಮಾಡಿಕೊಂಡಿದ್ದ ಅನ್ನ ಹಾಗೂ ಗರಂ ಮಸಾಲಾವನ್ನು ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಹುರಿದು ಪುಡಿ ಮಾಡಿಟ್ಟುಕೊಂಡ ಎಳ್ಳು ಪುಡಿಯನ್ನು ಉದುರಿಸಿದರೆ ಮೊಟ್ಟೆ ಪಲಾವ್ ಸವಿಯಲು ಸಿದ್ಧವಾಗುತ್ತದೆ.