ಕ್ರಿಸ್ಪಿ ಫ್ರೈಡ್ ಚಿಕನ್
ಕ್ರಿಸ್ಪಿ ಫ್ರೈಡ್ ಚಿಕನ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಚಿಕನ್ ಲೆಗ್ - 6
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಚಮಚ
- ಹಸಿ ಮೆಣಸಿನಕಾಯಿ - 6
- ಕಪ್ಪು ಮೆಣಸಿನ ಪುಡಿ - 1 ಚಮಚ
- ನಿಂಬೆ ರಸ - 2 ಚಮಚ
- ಮೈದಾಹಿಟ್ಟು - 1 ಬಟ್ಟಲು
- ಮೊಟ್ಟೆ ಬಿಳಿ - ಎರಡು ಮೊಟ್ಟೆಯದ್ದು
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಪುದೀನಾ ಸೊಪ್ಪು - ಸ್ವಲ್ಪ
- ನೀರು -ಅರ್ಧ ಬಟ್ಟಲು
- ಬ್ರೆಡ್ ಚೂರು - 1 ಬಟ್ಟಲು
- ಎಣ್ಣೆ - ಕರಿಯಲು
- ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
- ಮೊದಲು ಚಿಕನ್ ಲೆಗ್ ಪೀಸ್ ಗಳನ್ನು ಚೆನ್ನಾಗಿ ತೊಳೆದು ಅದರ ಮೇಲೆ ಚಾಕುವಿನಿಂದ ಗೆರೆಗಳನ್ನು ಎಳೆಯಬೇಕು. ಇದರಿಂದ ಮಸಾಲೆ ಚಿಕನ್ ಒಳಗೆ ಹೋಗಿ ರುಚಿ ಕೊಡುತ್ತದೆ. ನಂತರ ಚಿಕನ್ ಪೀಸ್ ಗಳಿಗೆ ಉಪ್ಪುನ್ನು ಸವರಬೇಕಿ.
- ಇದಕ್ಕೆ ನಿಂಬೆ ರಸ, ಶುಂಠಿ ಬೆಳ್ಳುಳ್ಳಿ ಪೋಸ್ಟ್, ಹಸಿ ಮೆಣಸಿನ ಕಾಯಿ ಪೇಸ್ಟ್, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪಿನ ಪೇಸ್ಟ್ ಹಾಕಿ 1 ಗಂಟೆಗಳ ಕಾಲ ನೆನೆಯಲು ಬಿಡಬೇಕಿ.
- ನಂತರ ಮೈದಾ ಹಿಟ್ಟಿಗೆ ಮೊಟ್ಟೆಯ ಬಿಳಿ ಭಾಗ, ಹಸಿ ಮೆಣಸಿನಕಾಯಿ ಪೇಸ್ಟ್, ಕಪ್ಪು ಮೆಣಸಿನ ಪುಡಿ ಮತ್ತು ಸ್ವಲ್ಪ ಬಿಸಿ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆಯಿಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದನಂತರ ಮಸಾಲೆಯಲ್ಲಿ ನೆನೆದ ಲೆಗ್ ಪೀಸ್ ಗಳನ್ನು ಮೈದಾ ಹಿಟ್ಟಿನ ಮಸಾಲೆಯೊಂದಿಗೆ ಅದ್ದಿ, ಬ್ರೆಡ್ ಚೂರಿನಲ್ಲಿ ಹೊರಳಾಡಿಸಿ ಎಣ್ಣೆಗ ಹಾಕಿ ಡೀಪ್ ಫ್ರೈ ಮಾಡಿದರೆ ರುಚಿಕರವಾದ ಕ್ರಿಸ್ಬೀ ಫ್ರೈಡ್ ಚಿಕನ್ ಸವಿಯಲು ಸಿದ್ಧವಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.