ಪಾತ್ರೆಯೊಂದನ್ನು ತೆಗೆದುಕೊಂಡು ಅಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ, ತೊಗರಿ ಬೇಳೆ ಹಾಗೂ ಮೆಂತ್ಯವನ್ನು ಹಾಕಿ ಕನಿಷ್ಠ 4 ಗಂಟೆಗಳ ಕಾಲ ನೆನೆಸಬೇಕು.
ಅವಲಕ್ಕಿಯನ್ನು ಪ್ರತ್ಯೇಕವಾಗಿ 1 ಗಂಟೆಗಳ ಕಾಲ ನೆನೆಹಾಕಬೇಕು.
ನಂತರ ಮಿಕ್ಸಿ ಜಾರ್ ತೆಗೆದುಕೊಂಡು ನೆನೆ ಹಾಕಿದ್ದ ಅಕ್ಕಿ, ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅವಲಕ್ಕಿಯನ್ನು ರುಬ್ಬಿಕೊಂಡು, ಪಾತ್ರೆಯೊಂದಕ್ಕೆ ಹಾಕಿ ಉಪ್ಪು ಹಾಕಿ 12 ಗಂಟೆಗಳ ಕಾಲ ನೆನೆಯಲು ಬಿಡಬೇಕು.
ನಂತರ ಇದಕ್ಕೆ ಸಕ್ಕರೆ, ರವೆ, ಅರಿಶಿಣದ ಪುಡಿ, ಚಿಟಿಕೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ನಂತರ ಒಲೆಯ ಮೇಲೆ ಪ್ಯಾನ್ ಇಟ್ಟು ಚೆನ್ನಾಗಿ ಕಾದ ನಂತರ ಹಿಟ್ಟನ್ನು ಹಾಕಿ ದೋಸೆಯಾಕಾರದಲ್ಲಿ ಹಾಕಿ ಕೆಂಪಗೆ ಸುಡಬೇಕು. ನಂತರ ಕೆಂಪು ಚಟ್ನಿಯನ್ನು ಒಂದು ಭಾಗದಲ್ಲಿ ಹಚ್ಚಿ ತೆಗೆಯಬೇಕು. ಆಲೂಗಡ್ಡೆ ಪಲ್ಯ ಹಾಗೂ ಕಾಯಿ ಚಟ್ನಿಯೊಂದಿಗೆ ದೋಸೆಯನ್ನು ತಿಂದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.