- ಮೊಸರು - 1 ಬಟ್ಟಲು
- ಒಣಗಿದ ಮೆಣಸಿನ ಕಾಯಿ - 6-8
- ಜೀರಿಗೆ - ಸ್ವಲ್ಪ
- ಸೋಂಪು - ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಶುಂಠಿ, ಬೆಳ್ಳುಳ್ಳಿ - ಸ್ವಲ್ಪ
- ನಿಂಬೆ ರಸ - 2 ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಮಟನ್ - ಅರ್ಧ ಕೆಜಿ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ
- ಕಾಳು ಮೆಣಸು - ಅರ್ಧ ಚಮಚ
- ತುಪ್ಪ - ಸ್ವಲ್ಪ
- ಅರಿಶಿಣ - ಚಿಟಿಕೆ
- ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ನಂತರ ತೊಳೆದ ಮಟನ್, ಸ್ವಲ್ಪ ನೀರು ಹಾಗಿ 35-40 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಬೇಕು.
- ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೊಸರು, ಒಣಗಿದ ಮೆಣಸಿನ ಕಾಯಿ, ಜೀರಿಗೆ, ಸೋಂಪು, ಉಪ್ಪು, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ, ಕಾಳು ಮೆಣಸು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅಗತ್ಯವೆನಿಸಿದರೆ, ಚಕ್ಕೆ, ಲವಂಗವನ್ನು ಹಾಕಬಹುದು.
- ಬೆಂದ ಮಟನ್ ಗೆ ಈ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಮಸಾಲೆ ಗಟ್ಟಿಯಾದ ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಕರವಾದ ಮಟನ್ ಘೀ ರೋಸ್ಟ್ ಮಸಾಲಾ ಸವಿಯಲು ಸಿದ್ಧ.