- ಮೈದಾ - 2 ಬಟ್ಟಲು
- ಸಕ್ಕರೆ - 1/2 ಬಟ್ಟಲು
- ತುಪ್ಪ - 1 ಚಮಚ
- ಮಜ್ಜಿಗೆ - ಅರ್ಧ ಬಟ್ಟಲು
- ಅಡುಗೆ ಎಣ್ಣೆ - ಕರಿಯಲು
- ಮೈದಾ ಹಿಟ್ಟಿಗೆ ಮಜ್ಜಿಗೆ ಹಾಕಿ ಕಲಸಬೇಕು. ಈ ಹಿಟ್ಟು ಒಂದು ರಾತ್ರಿಯಿಡೀ ನೆನೆಯಲು ಬಿಡಬೇಕು. ಮರುದಿನ ಹಿಟ್ಟಿಗೆ 2-3 ಚಮಚ ಮೈದಾ, ತುಪ್ಪ ಸೇರಿಸಿ ಮಿಶ್ರಣ ಮಾಡಬೇಕು.
- ಪಾತ್ರೆಯೊಂದನ್ನು ಒಲೆಯ ಮೇಲಿಟ್ಟು ಸಕ್ಕರೆ ಹಾಕಿ ಸಕ್ಕರೆ ಮುಳುಗುವಷ್ಟು ನೀರು ಹೇಕಿ ಪಾಕ ತಯಾರು ಮಾಡಿಕೊಳ್ಳಬೇಕು.
- ಪಾಕ ಹದಕ್ಕೆ ಬಂದನ ನಂತರ ಅದಕ್ಕೆ ಕೇಸರಿ ಹಾಕಿ ಸ್ವಲ್ಪ ಹೊಟ್ಟು ಇಳಿಸಬೇಕು.
- ಬಾಣಲೆಯ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಕಾಯಲು ಬಿಡಬೇಕು.
- ಕಲಸಿಟ್ಟುಕೊಂಡ ಹಿಟ್ಟನ್ನು ಒಂದು ಜಿಲೇಬಿ ತೂತಿನ ಪರಿಕರದಲ್ಲಿ ವೃತ್ತಾಕಾರವಾಗಿ ಎಣ್ಣೆಗೆ ಬಿಡಬೇಕು. ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ ತೆಗೆದು ಸಕ್ಕರೆ ಪಾಕಕ್ಕೆ ಹಾಕಬೇಕು. 5 ನಿಮಿಷಗಳ ಬಳಿಕ ಪಾಕದಿಂದ ತೆಗೆಯಬೇಕು. ಹೀಗೆ ಮಾಡಿದರೆ ರುಚಿಕರವಾದ ಹಾಗೂ ಗರಿ ಗರಿಯಾದ ಜಿಲೇಬಿ ಸವಿಯಲು ಸಿದ್ಧ.