ಬೇಕಾಗುವ ಸಾಮಾಗ್ರಿಗಳು.ಅಕ್ಕಿ- 1 ಬಟ್ಟಲುಸಾಸಿವೆ - 1 ಚಮಚಉದ್ದಿನಬೇಳೆ - 1 ಚಮಚಕರಿಬೇವು - ಸ್ವಲ್ಪಏಲಕ್ಕಿ - 2-3ಒಣಮೆಣಸಿನ ಕಾಯಿ - 5-6ಮೆಂತ್ಯ - 1 ಚಮಚಕೊಬ್ಬರಿ - ಅರ್ಧ ಬಟ್ಟಲುಉದ್ದ ಬದನೆಕಾಯಿ - 2-3ಕಡ್ಲೆಬೇಳೆ - 2 ಚಮಚಹುಣಸೆಹಣ್ಣು - ಸ್ವಲ್ಪಚಕ್ಕೆ - ಸ್ವಲ್ಪಲವಂಗ - ಸ್ವಲ್ಪಅರಿಶನ - ಅರ್ಧ ಚಮಚದನಿಯಾ - 1 ಚಮಚಉಪ್ಪು- ರುಚಿಗೆ ತಕ್ಕಷ್ಟು.ಮಾಡುವ ವಿಧಾನ....ಅಕ್ಕಿ ತೊಳೆದು ಅನ್ನವನ್ನು ಮಾಡಿಟ್ಟುಕೊಂಡು, ಅನ್ನ ತಣ್ಣಗಾಗಲು ಬಿಡಬೇಕು. ಸಣ್ಣ ಬಟ್ಟಲು ತೆಗೆದುಕೊಂಡು ಅದಕ್ಕೆ ಹುಣಸೆಹಣ್ಣು, ಸ್ವಲ್ಪ ನೀರು ಹಾಕಿ ನೆನೆಯಲು ಬಿಡಬೇಕು.ಒಲೆಯ ಮೇಲೆ ಪ್ಯಾನ್ ಇಟ್ಟು ಬಿಸಿ ಮಾಡಿ ನಂತ ಕಡ್ಲೆಬೇಳೆ, ಉದ್ದಿನಬೇಳೆ, ದನಿಯಾ, ಮೆಂತ್ಯ, ಚಕ್ಕೆ, ಏಲಕ್ಕಿ, ಲವಂಗ, ಒಣಗಿದ ಮೆಣಸಿನ ಕಾಯಿ, ಅರಿಶಿನ ಹಾಗೂ ಕೊಬ್ಬರಿ ಎಲ್ಲವನ್ನು ಕೆಂಪಗೆ ಹುರಿದುಕೊಂಡು ತಣ್ಣಗಾಗಲು ಬಿಡಬೇಕು. ತಣ್ಣಗಾದ ಬಳಿಕ ಮಿಕ್ಸಿ ಜಾರ್ ಗೆ ಪುಡಿ ಮಾಡಿಕೊಳ್ಳಬೇಕು.ಬದನೆಕಾಯಿಯನ್ನು ಚೆನ್ನಾಗಿ ತೊಳೆದೆ ಉದ್ದುದ್ದವಾಗಿ ಹೆಚ್ಚಿಕೊಳ್ಳಬೇಕು. ಮತ್ತೊಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ, ಕಡ್ಲೆಬೇಳೆ, ಉದ್ದಿನಬೇಳೆ, ಅರಿಶಿನ, ಕರಿಬೇವಿನ ಸೊಪ್ಪು ಹಾಗಿ ಒಗ್ಗರಣೆ ಮಾಡಿ ಹೆಚ್ಚಿಕೊಂಡ ಬದನೆಕಾಯಿ ಹಾಕಿ ಹುರಿಯಬೇಕು. 8-10 ನಿಮಿಷದ ಬಳಿಗ ಹುಣಸೆಹಣ್ಣಿನ ರಸ ಸೇಸಿ 5-10 ನಿಮಿಷ ಬದನೆಕಾಯಿ ಬೇಯಲು ಬಿಡಬೇಕು. ನಂತರ ವಾಂಗೀಬಾತ್ ಪುಡಿ, ಉಪ್ಪು, ಅನ್ನವನ್ನು ಸೇರಿಸಿ ಮಿಶ್ರಣವನ್ನು ಅನ್ನಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ವಾಂಗಿಬಾತ್ ಸವಿಯಲು ಸಿದ್ಧ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics