ಪನ್ನೀರ್ ಚಿಕನ್ ಗ್ರೇವಿ
ಪನ್ನೀರ್ ಚಿಕನ್ ಗ್ರೇವಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಚಿಕನ್ - ಅರ್ಧ ಕೆಜಿ
- ಪನ್ನೀರ್ - 100 ಗ್ರಾಂ
- ಟೊಮೆಟೋ ಪ್ಯೂರಿ - ಅರ್ಧ ಬಟ್ಟಲು
- ಈರುಳ್ಳಿ ಪ್ಯೂರಿ - ಅರಧ ಬಟ್ಟಲು
- ಈರುಳ್ಳಿ - ಸಣ್ಣಗೆ ಹೆಚ್ಚಿದ್ದು ಅರ್ಧ ಬಟ್ಟಲು
- ಗರಂ ಮಸಾಲ - 2 ಚಮಚ
- ಕಾಶ್ಮೀರಿ ಮಿರ್ಚಿ ಪೌಡರ್ - 1 ಚಮಚ
- ಧನಿಯಾ ಪುಡಿ - ಅರ್ಧ ಚಮಚ
- ಹಸಿಮೆಣಸಿನ ಕಾಯಿ - 6-7
- ಸಾಸಿವೆ - ಸ್ವಲ್ಪ
- ಎಣ್ಣೆ - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
- ಒಲೆಯ ಮೇಲೆ ಬಾಣಲೆ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ನಂತರ ಇದಕ್ಕೆ ಪನ್ನೀರ್ ತುಂಡುಗಳನ್ನು ಹಾಗಿ ಎರಡೂ ಬದಿಗಳಲ್ಲೂ ಕೆಂಪಗಾಗುವಂತೆ ಹುರಿದುಕೊಳ್ಳಬೇಕು.
- ನಂತರ ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಸಾಸಿರವೆ, ಈರುಳ್ಳಿ, ಹಸಿಮೆಣಸಿನ ಹಾಕಿ ಕೆಂಪಗೆ ಹುರಿದುಕೊಳ್ಳಬೇಕಿ. ಇದಕ್ಕೆ ಟೊಮೆಟೋ ಪ್ಯೂರಿ, ಈರುಳ್ಳಿ ಪ್ಯೂರಿ, ಗರಂ ಮಸಾಲೆ ಪುಡಿ, ಕಾಶ್ಮೀರಿ ಮಿರ್ಚಿ ಪೌಡರ್ ಹಾಗೂ ಧನಿಯಾ ಪುಡಿ ಹಾಕಿ ಹುರಿಯಬೇಕು.
- ನಂತರ ಇದಕ್ಕೆ ಪನ್ನೀರ್ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಕತ್ತರಿಸಿಕೊಂಡ ಕೋಳಿಮಾಂಸ, ಉಪ್ಪು ಹಾಕಿ ಮಾಂಸ ಬೇಯಲು ಬಿಡಬೇಕು. ನಡುವಲ್ಲಿ ಮಧ್ಯೆಮಧ್ಯೆ ಕೈಯಾಡಿಸುತ್ತಿರಬೇಕು. ಈ ರೀತಿ 10-15 ನಿಮಿಷಗಳ ಬೇಯಿಸಿದರೆ ರುಚಿಕರವಾಗ ಪನ್ನೀರ್ ಚಿಕನ್ ಗ್ರೇವಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.