ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ನವಣೆಯಲ್ಲಿ ಮಾಡಿಕೊಂಡ ಹಿಟ್ಟನ್ನು ಹಾಕಬೇಕು. ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ನಂತರ ಬಿಸಿ ನೀರನ್ನು ಹಾಕಿಕೊಂಡು ಸ್ವಲ್ಪ-ಸ್ವಲ್ಪವಾಗಿ ಹಿಟ್ಟಿನ ರೀತಿಯಲ್ಲಿ ಕಲಸಿಕೊಳ್ಳಬೇಕು. ಚಪಾತಿ ಹಿಟ್ಟಿನಂತೆ ಸ್ವಲ್ಪ ಮೃದುವಾಗಿ ಬಂದ ನಂತರ ಕವರ್ ವೊಂದಕ್ಕೆ ಹಾಕಿ 15-20 ನಿಮಿಷ ನೆನೆಯಲು ಬಿಡಬೇಕು.
ನಂತರ ಬಟರ್ ಪೇಪರ್ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿ ಹಿಟ್ಟನ್ನು ಬಾಲಿನಂತೆ ಉಂಡೆ ಮಾಡಿಕೊಂಡು ಅದರ ಮೇಲಿಡಬೇಕು. ಮತ್ತೊಂದು ಬಟರ್ ಪೇಪರ್ ತೆಗೆದುಕೊಂಡು ಅದಕ್ಕೆ ತುಪ್ಪ ಸವರಿ ಉಂಡೆಯ ಮೇಲಿಟ್ಟು ಚಪಾತಿಯಂತೆ ತಟ್ಟಬೇಕು.
ಒಲೆಯ ಮೇಲೆ ತವಾ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಸುಟ್ಟರೆ, ರುಚಿಕರವಾದ ನವಣೆ ರೊಟ್ಟಿ ತಿನ್ನಲು ಸಿದ್ಧವಾಗುತ್ತದೆ. ಕಡಲೆಬೀಜ ಚಟ್ನಿಯೊಂದಿಗೆ ತರಕಾರಿ ಪಲ್ಯ ಹಾಕಿ ತಿಂದರೆ ನವಣೆ ರೊಟ್ಟಿಯ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.