ಪನ್ನೀರ್ ನವಣೆ ಫ್ರೈಡ್ ರೈಸ್ 
ಅಡುಗೆ

ಪನ್ನೀರ್ ನವಣೆ ಫ್ರೈಡ್ ರೈಸ್

ಪನ್ನೀರ್ ನವಣೆ ಫ್ರೈಡ್ ರೈಸ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು

  • ನವಣೆಯಲ್ಲಿ ಮಾಡಿದ ಅಕ್ಕಿ - 1 ಬಟ್ಟಲು
  • ಕತ್ತರಿಸಿಕೊಂಡ ಈರುಳ್ಳಿ - 1 ಬಟ್ಟಲು
  • ಬಟಾಣಿ - 1/4 ಬಟ್ಟಲು
  • ಕತ್ತರಿಸಿಕೊಂಡ ಗೋಡಂಬಿ - 10
  • ಸಣ್ಣದಾಗಿ ಹೆಚ್ಚಿಕೊಂಡ ಪನ್ನೀರ್ - 1/4 ಬಟ್ಟಲು
  • ಜೀರಿಗೆ - 1 ಚಮಚ
  • ಪಲಾವ್'ಗೆ ಹಾಕುವ ಎಲೆ - 2-3
  • ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ - 3-4
ಮಾಡುವ ವಿಧಾನ...
  • 1 ಕಪ್ ನವಣೆ ಅಕ್ಕಿಗೆ 2 ಬಟ್ಟಲು ನೀರು ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಪ್ರೆಷರ್ ಕುಕ್ಕರೆ ಹಾಕಿ ಅನ್ನ ಮಾಡಿಕೊಳ್ಳಬೇಕು. ನಂತರ ಅನ್ನ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.
  • ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಇದಕ್ಕೆ ಸ್ವಲ್ಪ ನೀರು ಹಾಕಿ ಬಟಾಣಿಯನ್ನು 5-10 ನಿಮಿಷಗಳ ಕಾಲ ಬೇಯಿಸಿಕೊಂಡು, ನೀರು ಬಸಿದು ಬೆಂದ ಬಟಾಣೆಯನ್ನು ಪಾತ್ರೆಯೊಂದಕ್ಕೆ ಹಾಕಿಕೊಳ್ಳಬೇಕು.
  • ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಪನ್ನೀರ್'ನ್ನು ಕೆಂಪಗೆ ಹುರಿದುಕೊಳ್ಳಬೇಕು.
  • ಪ್ಯಾನ್ ವೊಂದನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಎಣ್ಣೆ ಹಾಕಿ, ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಜೀರಿಗೆ, ಈರುಳ್ಳಿ, ಹಸಿಮೆಣಸಿನ ಕಾಯಿ, ಗೋಡಂಬಿ ಮತ್ತು ಪಲಾವ್ ಎಲೆಗಳನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಪನ್ನೀರ್ ಹಾಗೂ ಬೆಂದ ಬಟಾಣೆ, ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈಗಾಗಲೇ ಮಾಡಿಕೊಂಡ ನವಣೆ ಅನ್ನವನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾಗ ಹಾಗೂ ಆರೋಗ್ಯಕವಾದ ಪನ್ನೀರ್ ನವಣೆ ಫ್ರೈಡ್ ರೈಸ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ