ಫ್ರೆಂಚ್ ಫ್ರೈಸ್
ಫ್ರೆಂಚ್ ಫ್ರೈಸ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಆಲೂಗಡ್ಡೆ - ದೊಡ್ಡ ಗಾತ್ರದ್ದು 2
- ಉಪ್ಪು- ರುಚಿಗೆ ತಕ್ಕಷ್ಟು
- ವಿನೆಗರ್ - 2 ಚಮಚ
- ಕೋಲ್ಡ್ ವಾಟರ್ - ಒಂದು ಬಟ್ಟಲು
- ಎಣ್ಣೆ - ಕರಿಯಲು
ಮಾಡುವ ವಿಧಾನ...
- ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದುಕೊಂಡು ಉದ್ದವಾಗಿ ಫ್ರೆಂಚ್ ಫ್ರೈಸ್ ಆಕಾರದಲ್ಲಿ ಕತ್ತರಿಸಿಕೊಳ್ಳಬೇಕು.
- ನಂತರ ಕೋಲ್ಡ್ ವಾಟರ್ ತೆಗೆದುಕೊಂಡು 1-2 ಗಂಟೆಗಳ ಕಾಲ ನೆನೆ ಹಾಕಬೇಕು.
- ನಂತರ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ 2 ಚಮಚ ಉಪ್ಪು ಹಾಗೂ ವಿನೇಗರ್ ಹಾಕಿ 7-10 ನಿಮಿಷಗಳ ಕಾಲ ನೆನೆಸಬೇಕು.
- ನಂತರ ನೆನೆದ ಆಲೂ ಪೀಸ್ ಗಳನ್ನು ತೆಗೆದು ಕಾಟನ್ ಬಟ್ಟೆಗೆ ಹಕಿ ಚೆನ್ನಾಗಿ ಒತ್ತಬೇಕು.
- ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು ಕಾಯಲು ಬಿಡಬೇಕು. ನಂತರ ಆಲೂಪೀಸ್ ಗಳನ್ನು ಹಾಕಿ 3-4 ನಿಮಿಷ ಕರಿದು ತೆಗೆದು ಬಿಡಬೇಕು.
- ಅದು ತಣ್ಣಗಾದ ನಂತರ ಮತ್ತೆ ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಟೊಮೆಟೋ ಸಾಸ್ ನೊಂದಿಗೆ ತಿಂದರೆ ಫ್ರೆಂಚ್ ಫ್ರೈಸ್ ನ ರುಚಿ ಮತ್ತಷ್ಟು ಹೆಚ್ಚುತ್ತದೆ.