ಮೊದಲು ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಬೇಕು.
ಎಣ್ಣೆ ಕಾದ ನಂತರ ಚಕ್ಕೆ, ಲವಂಗ, ಏಲಕ್ಕಿಯನ್ನು ಹಾಕಬೇಕು. 1 ನಿಮಿಷದ ಬಳಿಕ ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು.
ನಂತರ ಉಪ್ಪು, ಅರಿಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ, ದನಿಯಾ ಪುಡಿ, ಖಾರದ ಪುಡಿ, ಟೊಮೆಟೋವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
ನಂತರ 1-2 ಬಟ್ಟಲು ನೀರು ಹಾಕಿ ಕುದಿಯಲು ಬಿಡಬೇಕು. ಇದಕ್ಕೆ ಚಿಕನ್ ಪೀಸ್ ಗಳನ್ನು ಹಾಕಿ 20-30 ನಿಮಿಷ ಬೇಯಿಸಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಕರವಾದ ಚಿಕನ್ ಗ್ರೇವಿ ಸವಿಯಲು ಸಿದ್ಧ.