ಫಿಶ್ ಫ್ರೈ
ಫಿಶ್ ಫ್ರೈ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಮೀನು - ಅರ್ಧ ಕೆಜಿ
- ಅರಿಶಿನ - 2 ಚಿಟಿಕೆ
- ಕಾಶ್ಮೀರಿ ಚಿಲ್ಲಿ ಪೌಡರ್ - 2 ಚಮಚ
- ಜೀರಿಗೆ ಪುಡಿ - 2 ಚಮಚ
- ಸೋಂಪು ಪುಡಿ - ಅರ್ಧ ಚಮಚ
- ಗರಂ ಮಸಾಲಾ ಪುಡಿ - 1 1/2 ಚಮಚಂ
- ಕಾಳು ಮೆಣಸಿನ ಪುಡಿ - 1 ಚಮಚ
- ನಿಂಬೆಹಣ್ಣಿನ ರಸ - ಅರ್ಧ ಚಮಚ
- ಎಣ್ಣೆ - 1 ಚಮಚ
- ಕರಿಬೇವು - ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
- ಮೊದಲು ಮೀನನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಬೇಕು.
- ನಂತರ ಪಾತ್ರೆಯೊಂದಕ್ಕೆ ಅರಿಶಿನ, ಕಾಶ್ಮೀರಿ ಚಿಲ್ಲಿ ಪೌಡರ್, ಜೀರಿಗೆ ಪುಡಿ, ಸೋಂಪು ಪುಡಿ, ಗರಂ ಮಸಾಲಾ ಪುಡಿ, ಕಾಳು ಮೆಣಸಿನ ಪುಡಿ, ನಿಂಬೆಹಣ್ಣಿನ ರಸ, ಎಣ್ಣೆ, ಕರಿಬೇವು, ಉಪ್ಪು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.
- ನಂತರ ಈಗಾಗಲೇ ಶುಚಿ ಮಾಡಿಕೊಂಡ ಮೀನಿಗೆ ಈ ಮಸಾಲಾವನ್ನು ಚೆನ್ನಾಗಿ ಕೋಟ್ ಮಾಡಿ 1 ಗಂಟೆಗಳ ಕಾಲ ನೆನೆಯಲು ಬಿಡಬೇಕು.
- ನಂತರ ಬಾಣಲೆಗೆ 6-7 ಚಮಚ ಎಣ್ಣೆಯನ್ನು ಹಾಕಿ ಮಸಾಲಾದಲ್ಲಿ ನೆನೆದ ಫಿಶ್ ನ್ನು ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಫ್ರೈ ಮಾಡಿಕೊಂಡರೆ ರುಚಿಕರವಾಗ ಫಿಶ್ ಫ್ರೈ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.