ಆಲೂ ಚಿಕನ್ ಬಾಂಬ್
ಆಲೂ ಚಿಕನ್ ಬಾಂಬ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ 8
- ಅಚ್ಚ ಖಾರದ ಪೂಡಿ - 2 ಚಮಚ
- ಕಾಳು ಮೆಣಸಿನ ಪುಡಿ - 2 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಬೋನ್ ಲೆನ್ ಚಿಕನ್ - ಅರ್ಧ ಕೆಜಿ
- ಜೀರಿಗೆ - 2 ಚಮಚ
- ಎಣ್ಣೆ - ಸ್ವಲ್ಪ
- ಬೆಳ್ಳುಳ್ಳಿ - ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಈರುಳ್ಳಿ - ಹೆಚ್ಚಿದ್ದು 1 ಬಟ್ಟಲು
- ಕಾಪ್ಸಿಕಲ್ - ಹೆಚ್ಚಿದ್ದು 1 ಬಟ್ಟಲು
- ಬ್ರೆಡ್ ಪೊಡರ್ - 2 ಬಟ್ಟಲು
- ಮೊಟ್ಟೆ - 4-5
ಮಾಡುವ ವಿಧಾನ...
- ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದುಕೊಂಡು ಕತ್ತರಿಸಿಕೊಂಡು ನೀರಿನಲ್ಲಿ ಚೆನ್ನಾಗಿ ಬೇಯಲು ಬಿಡಬೇಕು.
- ಬೆಂದ ಆಲೂಗಡ್ಡೆಯನ್ನು ತೆಗೆದುಕೊಂಡು ಅದಕ್ಕೆ, 1 ಚಮಚ ಅಚ್ಚ ಖಾರದ ಪುಡಿ, ಉಪ್ಪು, ಕಾಳು ಮೆಣಸಿನ ಪುಡಿ ಚೆನ್ನಾಗಿ ಮಿಶ್ರಣ ಮಾಡಿ ಆಲೂಗಡ್ಡೆಯನ್ನು ನುಣ್ಣಗೆ ಹಿಸುಕಿಕೊಳ್ಳಬೇಕು.
- ಬೋನ್ ಲೆಸ್ ಚಿಕನ್ ನನ್ನು ಕೀಮಾದಂತೆ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಅದಕ್ಕೆ ಜೀರಿಗೆ ಪುಡಿ, 1 ಚಮಚ ಅಚ್ಚ ಖಾರದ ಪುಡಿ, ಉಪ್ಪು, ಕಾಳು ಮೆಣಿಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ಹೆಚ್ಚಿಕೊಂಡ ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ, ಉಪ್ಪು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಮಿಶ್ರಣ ಮಾಡಿಕೊಂಡ ಚಿಕನ್ ಪೀಸ್ ಗಳು ಹಾಗೂ ಸ್ವಲ್ಪ ನೀರು ಹಾಕಿ 5-10 ನಿಮಿಷ ಬೇಯಿಸಿಕೊಳ್ಳಬೇಕು.
- ನಂತರ ಆಲೂ ಮಿಶ್ರಣವನ್ನು ಸಣ್ಣ ಉಂಡೆಯಂತೆ ತೆಗೆದುಕೊಂಡು ಚಿಕ್ಕ ಪೂರಿಯಂತೆ ಕೈಯಲ್ಲೇ ತಟ್ಟಿ ಅದರ ಮಧ್ಯೆ ಬಂದ ಚಿಕನ್ ಹಾಕಿ ಮುಚ್ಚಿ ಉಂಡೆ ಮಾಡಿಕೊಳ್ಳಬೇಕು.
- ಈ ಉಂಡೆಯನ್ನು ಮೊಟ್ಟೆಯಲ್ಲಿ ಅದ್ದಿ, ನಂತರ ಬ್ರೆಡ್ ಪೌಡರ್ ನಲ್ಲಿ ಅದ್ದಿ ಎಣ್ಣೆಗೆ ಹಾಕಿ ಕೆಂಪಗೆ ಕರಿದರೆ, ರುಚಿಕರವಾದ ಆಲೂ ಚಿಕನ್ ಬಾಂಬ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.