- ತುಪ್ಪ - 3 ಚಮಚ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ
- ಅರಿಶಿಣ - ಅರ್ಧ ಚಮಚ
- ಮಟನ್ - 1 ಕೆಜಿ
- ಉಪ್ಪು - ರುಚಿಗೆ ತಕ್ಕಷ್ಟು
- ಕಾಶ್ಮೀರಿ ಮೆಣಸಿನ ಕಾಯಿ - 4-5
- ದನಿಯಾ - 1 ಚಮಚ
- ಮೆಣಸು - 1 ಚಮಚ
- ಸೋಂಪು - 1 ಚಮಚ
- ಜೀರಿಗೆ - 2 ಚಮಚ
- ಚಕ್ಕೆ - 1
- ಲವಂಗ - 4
- ಕೆಂಪು ಮೆಣಸಿನ ಕಾಯಿ - 6
- ಮೊದಲು ಪ್ರೆಷರ್ ಕುಕ್ಕರ್ ತೆಗೆದುಕೊಂಡು ಅದಕ್ಕೆ ತುಪ್ಪ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಉಪ್ಪು, ಮೆಟನ್ ಹಾಕಿ, ನೀರು ಹಾಕಿ 4-5 ಕೂಗು ಕೂಗಿಸಿಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಕಾಶ್ಮೀರಿ ಮೆಣಸಿಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ದನಿಯಾ, ಮೆಣಸು, ಸೋಂಪು, ಜೀರಿಗೆ, ಚಕ್ಕೆ, ಲವಂಗ, ಕೆಂಪು ಮೆಣಸಿನ ಕಾಯಿಯನ್ನು ಹುರಿದುಕೊಳ್ಳಬೇಕು.
- ಮಿಕ್ಸಿ ಜಾಗೆದುಕೊಂಡು ಹುರಿದುಕೊಂಡ ಎಲ್ಲಾ ಸಾಮಾಗ್ರಿಗಳ, ಬೆಳ್ಳುಳ್ಳಿ ದೊಡ್ಡ 2 ಎಸಳು, ಶುಂಠಿ ಚಿಕ್ಕದು, ನಿಂಬೆಹಣ್ಣಿನ ರಸ ಹಾಗೂ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
- ಪ್ರೆಷರ್ ಕುಕ್ಕರ್ ಮುಚ್ಚಳ ತೆಗೆದು ಬಂದಿರುವ ಮಟನ್ ನಲ್ಲಿ ಉಳಿದ ನೀರನ್ನು ತೆಗೆದು ಪಾತ್ರೆಯೊಂದಕ್ಕೆ ಹಾಕಿಟ್ಟುಕೊಳ್ಳಬೇಕು.
- ಬಾಣಲೆಗೆ ಸ್ವಲ್ಪ ತುಪ್ಪವನ್ನು ಹಾಕಿ ರುಬ್ಬಿಕೊಂಡ ಮಿಶ್ರಣ, ಅರ್ಧ ಬಟ್ಟಲು ಮೊಸರು, ಮಟನ್ ನಿಂದ ತೆಗೆದ ನೀರು, ಸ್ವಲ್ಪ ಉಪ್ಪು ಹಾಕಿ ಕುದಿಯಲು ಬಿಡಬೇಕು. ನಂತರ ಬೆಂದ ಮಟನ್ ಹಾಕಿ 5-10 ನಿಮಿಷ ಬೇಯಿಸಿದರೆ ರುಚಿಕರವಾದ ಮಟನ್ ಘೀ ರೋಸ್ಟ್ ಸವಿಯಲು ಸಿದ್ಧ.