ಬಾಂಬೆ ಬಿರಿಯಾನಿ
ರುಚಿಕರವಾದ ಬಾಂಬೆ ಬಿರಿಯಾನಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಎಣ್ಣೆ - 2-3 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಜಾಯಿ ಪತ್ರೆ - 2
- ಮರಾಠಿ ಮೊಗ್ಗು - 2
- ಪಲಾವ್ ಎಲೆ - 2-3
- ಕಾಳು ಮೆಣಸು - 1 ಚಮಚ
- ಚಕ್ಕೆ, ಲವಂಗ - ಸ್ವಲ್ಪ
- ಕಪ್ಪು ಏಲಕ್ಕಿ - ಸ್ವಲ್ಪ
- ಅಕ್ಕಿ - 2 ಬಟ್ಟಲು
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ
- ಜೀರಿಗೆ - 1 ಚಮಚ
- ಚಿಕನ್ - ಅರ್ಧ ಕೆಜಿ
- ಅರಿಶಿನ - ಸ್ವಲ್ಪ
- ಅಚ್ಚ ಖಾರದ ಪುಡಿ - 1 ಚಮಚ
- ದನಿಯಾ ಪುಡಿ - 1 ಚಮಚ
- ಜೀರಿಗೆ ಪುಡಿ - ಸ್ವಲ್ಪ
- ಗರಂ ಮಸಾಲಾ - ಕಾಲು ಚಮಚ
- ಕಾಳು ಮೆಣಸಿನ ಪುಡಿ - ಸ್ವಲ್ಪ
- ಟೊಮೆಟೋ - 1 ಬಟ್ಟಲು
- ಮೊಸಲು - 1 ಬಟ್ಟಲು
- ಪುದೀನಾ -ಕತ್ತರಿಸಿದ್ದು ಸ್ವಲ್ಪ
- ಕೊತ್ತಂಬರಿ ಸೊಪ್ಪು -ಕತ್ತರಿಸಿದ್ದು ಸ್ವಲ್ಪ
- ಕೇಸರಿ- ಸ್ವಲ್ಪ
- ಹಾಲು - 2 ಚಮಚ
ಮಾಡುವ ವಿಧಾನ...
- ಮೊದಲು ಪ್ಯಾನ್ ಗೆ 2 ಬಟ್ಟಲು ಅಕ್ಕಿಗೆ 4 ಬಟ್ಟಲು ನೀರು ಹಾಕಬೇಕು.
- ಈ ನೀರಿಗೆ 2 ಚಮಚ ಅಡುಗೆ ಎಣ್ಣೆ, ಅನ್ನಕ್ಕೆ ಬೇಕಾದಷ್ಟು ಉಪ್ಪು ಹಾಕಬೇಕು. ಜಾಯಿ ಪತ್ರೆ, ಮರಾಠಿ ಮೊಗ್ಗು, ಪಲಾವ್ ಎಲೆ, ಕಾಳು ಮೆಣಸು, ಚಕ್ಕೆ, ಲವಂಗ, ಕಪ್ಪು ಏಲಕ್ಕಿಯನ್ನು ಹಾಕಿ 5 ನಿಮಿಷ ಕುದಿಸಿ ಚಿಕ್ಕ ಪಾತ್ರೆಯೊಂದಕ್ಕೆ ತೆಗೆದಿಟ್ಟುಕೊಳ್ಳಬೇಕು.
- ಇದೇ ನೀರಿಗೆ ಅಕ್ಕಿಯನ್ನು ಹಾಕಿ ಅನ್ನವನ್ನು ಮಾಡಿಕೊಳ್ಳಬೇಕು. ಹಾಲಿನಲ್ಲಿ ಕೇಸರಿ ದಳಗಳನ್ನು ಹಾಕಿ 5-10 ನಿಮಿಷ ನೆನೆಯಲು ಬಿಡಬೇಕು.
- ಮತ್ತೊಂದು ಕಡೆ ಬಾಣಲೆಯನ್ನು ಇಟ್ಟು, ಎಣ್ಣೆಯನ್ನು ಹಾಕಬೇಕು. ಎಣ್ಣೆ ಕಾದ ನಂತರ ಶುಂಠಿ, ಬೆಳ್ಳುಳ್ಳು ಪೇಸ್ಟ್, ಜೀರಿಗೆ ಹಾಕಿ ಹುರಿದುಕೊಳ್ಳಬೇಕು. ಚಿಕನ್, ಉಪ್ಪು, ಖಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
- ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಗರಂ ಮಸಾಲ, ಮೊದಲೇ ಬೇಯಿಸಿಕೊಂಡ ಜಾಯಿಕಾಯಿ, ಮರಾಠಿಮೊಗ್ಗು ಎಲ್ಲವನ್ನೂ ಇದಕ್ಕೆ ಸೇರಿಸಬೇಕು. ಟೊಮೆಟೊ, ಸ್ವಲ್ಪ ಬಿಸಿ ನೀರು, ಮೊಸರು ಸೇರಿಸಿ 15-20 ನಿಮಿಷ ಬೇಯಲು ಬಿಡಬೇಕು. ನಂತರ ಮತ್ತೆ ಸ್ವಲ್ಪ ಟೊಮೆಟೋ, ಪುದೀನಾ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಶುಂಠಿಯನ್ನು ಹಾಕಿ 5 ನಿಮಿಷ ಬೇಯಲು ಬಿಡಬೇಕು.
- ನಂತರ ಪಾತ್ರೆಯೊಂದಕ್ಕೆ ಸ್ವಲ್ಪ ಬೆಂದ ಚಿಕನ್ ಮಸಾಲೆಯನ್ನು ಹಾಕಿ ಅದರ ಮೇಲೆ ಸ್ವಲ್ಪ ಅನ್ನ ಹಾಕಬೇಕು. ಮತ್ತೆ ಮಸಾಲೆಯನ್ನು ಹಾಕಿ ಅದರ ಮೇಲೆ ಅನ್ನ ಹಾಕಿ 4-5 ಚಮಚ ಬಿಸಿ ನೀರು ಹಾಗೂ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಹಾಕಿ ಕಡಿಮೆ ಉರಿಯಲ್ಲಿ 5-10 ನಿಮಿಷ ಬೇಯಲು ಬಿಡಬೇಕು. ನಂತರ ಮಸಾಲೆಯೊಂದಿಗೆ ಅನ್ನವನ್ನು ಮಿಶ್ರಣ ಮಾಡಿದರೆ, ರುಚಿಕರವಾಗ ಬಾಂಬೆ ಬಿರಿಯಾನಿ ಸವಿಯಲು ಸಿದ್ಧ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.