- ತುಪ್ಪ - 1 ಚಮಚ
- ದ್ರಾಕ್ಷಿ - ಸ್ವಲ್ಪ
- ಗೋಡಂಬಿ - ಸ್ವಲ್ಪ
- ಹಾಲು - 3 ಬಟ್ಟಲು
- ಸಕ್ಕರೆ - 1/4 ಬಟ್ಟಲು
- ಪನ್ನೀರ್ - ಅರ್ಧ ಬಟ್ಟಲು
- ಏಲಕ್ಕಿ ಪುಡಿ - ಚಿಟಿಕೆಯಷ್ಟು
- ಮೊದಲು ಬಾಣಲೆಗೆ 1 ಚಮಚ ತುಪ್ಪವನ್ನು ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಹಾಲನ್ನು ಹಾಕಿ ಕಾಯಲು ಬಿಡಬೇಕು. ಆಗಾಗ ಕೈಯಾಡಿಸಿ ಹಾಲು ಗಟ್ಟಿಯಾಗುವಂತೆ ಕಾಯಿಸಬೇಕು.
- ಹಾಲು ಗಟ್ಟಿಯಾದ ಬಳಿಕ ಸಕ್ಕರೆ, ಪನ್ನೀರ್ ಹಾಕಿ 5 ನಿಮಿಷಗಳ ಕಾಲ ಕಾಯಲು ಬಿಟ್ಟು, ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಡ್ರೈ ಫ್ರೂಟ್ಸ್ ಹಾಕಿ ಅಲಂಕರಿಸಿದರೆ ರುಚಿಕರವಾದ ಪನ್ನೀರ್ ಕೀರ್ ಸವಿಯಲು ಸಿದ್ಧ.