ಮಂಗಳೂರು ಬನ್ಸ್
ರುಚಿಕರವಾದ ಮಂಗಳೂರು ಬನ್ಸ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಬಾಳೆಹಣ್ಣು - 2-3
- ಮೈದಾ ಹಿಟ್ಟು - 2 ಬಟ್ಟಲು
- ಸಕ್ಕರೆ - 1 ಚಮಚ
- ಮೊಸರು - ಅರ್ಧ ಬಟ್ಟಲು
- ಅಡುಗೆ ಸೋಡಾ - 1 ಚಿಟಿಕೆಯಷ್ಟು
- ಜೀರಿಗೆ - ಅರ್ಧ ಚಮಚ
- ಎಣ್ಣೆ - ಕರಿಯಲು ಅಗತ್ಯವಿದ್ದಷ್ಟು
- ಉಪ್ಪು - ಅರ್ಧ ಚಮಚ
ಮಾಡುವ ವಿಧಾನ...
- ಬಾಳೆಹಣ್ಣಿನ ಸಿಪ್ಪೆ ತೆಗೆದು ಸಣ್ಣ ಪಾತ್ರೆಯೊಂದರಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು.
- ಬಳಿಕ ಇದಕ್ಕೆ ಮೊಸರು, ಸಕ್ಕರೆ, ಸೋಡಾ, ಉಪ್ಪು, ಜೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ನಂತರ ಮೈದಾಹಿಟ್ಟು ಹಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹಿಟ್ಟು ತಯಾರು ಮಾಡಿಕೊಳ್ಳಬೇಕು. ಬಳಿಕ ಕಲಸಿದ ಹಿಟ್ಟು 8-10 ಗಂಟೆಗಳ ಕಾಲ ನೆನೆಯಲು ಬಿಡಬೇಕು.
- ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು. ನಿಂಬೆಹಣ್ಣಿನ ಗಾತ್ರಕ್ಕೆ ಹಿಟ್ಟನ್ನು ಉಂಡೆ ಮಾಡಿ ಪೂರಿಯಂತೆ ಲಟ್ಟಿಸಿಕೊಳ್ಳಬೇಕು. ಕಾದ ಎಣ್ಣೆಗೆ ಈ ಲಟ್ಟಿಸಿಕೊಂಡ ಬನ್ಸ್ ನ್ನು ಹಾಕಿ ಎರಡೂ ಬದಿಯಲ್ಲಿ ಕಂದು ಬಣ್ಣ ಬರವವರೆಗೆ ಕರಿದು ತೆಗೆದರೆ ರುಚಿಕರವಾದಮಂಗಳೂರು ಬನ್ಸ್ ಸವಿಯಲು ಸಿದ್ಧ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.