- ಸಕ್ಕರೆ 1 ಬಟ್ಟಲು
- ಕಸ್ಟರ್ಡ್ ಪುಡಿ - ಅರ್ಧ ಬಟ್ಟಲು
- ಕೇಸರಿ ದಳ - 3-4
- ತುಪ್ಪು - ಸ್ವಲ್ಪ
- ಗೋಡಂಬಿ - ಸಣ್ಣಗೆ ಕತ್ತರಿಸಿದ್ದು ಅರ್ಧ ಹಿಡಿಯಷ್ಟು
- ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಅದಕ್ಕೆ ಸಕ್ಕರೆ ಹಾಗೂ ಕಸ್ಟರ್ಡ್ ಪುಡಿ, ಒಂದು ಬಟ್ಟಲು ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪು ಹಾಕಿ. ತುಪ್ಪ ಕಾದ ಬಳಿಕ ಗೋಡಂಬಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಕಸ್ಟರ್ಡ್ ಪುಡಿ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಕೈಯಾಡಿಸಬೇಕು. ಬಳಿಕ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 25-30 ನಿಮಿಷಗಳ ಸುಧೀರ್ಘವಾಗಿ ಬಾಣಲೆ ತಳಬಿಡುವವರೆಗೂ ಕೈಯಾಡಿಸುತ್ತಿರಬೇಕು. ಬಳಿಕ ತಟ್ಟೆಯೊಂದಕ್ಕೆ ತುಪ್ಪ ಸವರಿ ಮಿಶ್ರಣವನ್ನು ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ, ಅಲಂಕರಿಸಿದರೆ, ರುಚಿಕರವಾದ ಕಸ್ಟರ್ಡ್ ಹಲ್ವ ಸವಿಯಲು ಸಿದ್ಧ.