- ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
- ಪಲಾವ್ ಎಲೆ - 2-3
- ಚಕ್ಕೆ- 2-3
- ಜೀರಿಗೆ- ಅರ್ಧ ಚಮಚ
- ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
- ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
- ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಅಚ್ಚ ಖಾರದ ಪುಡಿ- 1 ಚಮಚ
- ಅರಿಶಿನ- ಕಾಲು ಚಮಚ
- ದನಿಯಾ ಪುಡಿ - ಮುಕ್ಕಾಲು ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಗರಂ ಮಸಾಲೆ ಪುಡಿ - 1 ಚಮಚ
- ಆಮ್ ಚೂರ್ ಪುಡಿ- 1 ಚಮಚ
- ಕಾಬುಲ್ ಕಡಲೆಕಾಳು- ನೆನೆಸಿದ್ದು 1 ಬಟ್ಟಲು
- ಭಟೂರೆಗೆ ಬೇಕಾಗುವ ಪದಾರ್ಥಗಳು
- ಮೈದಾಹಿಟ್ಟು- 1 ಬಟ್ಟಲು
- ರವೆ- 1 ಚಮಚ
- ಸಕ್ಕರೆ- 1 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಬೇಕಿಂಗ್ ಪೌಡರ್- ಅರ್ಧ ಚಮಚ
- ಅಡುಗೆ ಸೋಡ- ಸ್ವಲ್ಪ
- ಮೊಸರು- 1 ಬಟ್ಟಲು
- ಕುಕ್ಕರ್'ನ್ನು ಒಲೆಯ ಮೇಲಿಟ್ಟು ಅದಕ್ಕೆ 1 ಚಮಚ ಎಣ್ಣೆ, ಪಲಾವ್ ಎಲೆ, ಚಕ್ಕೆ, ಜೀರಿಗೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಈರುಳ್ಳಿ, ಟೊಮೆಟೋ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಇದಕ್ಕೆ ಅಚ್ಚ ಖಾರದ ಪುಡಿ, ಅರಿಶಿನ, ದನಿಯಾ ಪುಡಿ, ಉಪ್ಪು, ಗರಂ ಮಸಾಲೆ ಪುಡಿ, ಆಮ್ ಚೂರ್ ಪುಡಿ, ಕಾಬುಲ್ ಕಡಲೆಕಾಳು ಹಾಕಿ 3-4 ಕೂಗು ಕೂಗಿಸಿಕೊಂಡರೆ ಛೋಲೆ ಸಿದ್ಧಗೊಳ್ಳುತ್ತದೆ.
- ಭಟೂರೆ ತಯಾರಿಸಲು ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ರವೆ, ಉಪ್ಪು, ಸಕ್ಕರೆ, ಬೇಕಿಂಗ್ ಪೌಡರ್, ಅಡುಗೆ ಸೋಡಾ, ಮೊಸರು ಹಾಕಿ ಚೆನ್ನಾಗಿ ನಾದಿಕೊಂಡು ಹಿಟ್ಟು ತಯಾರು ಮಾಡಿಕೊಳ್ಳಬೇಕು. ಹಿಟ್ಟು 2-3 ಗಂಟೆಗಳ ಕಾಲ ನೆನೆಯಲು ಬಿಡಬೇಕು.
- ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಹಿಟ್ಟನ್ನು ಪೂರಿಯಂತೆ ದೊಡ್ಡ ಆಕಾರದಲ್ಲಿ ಲಟ್ಟಿಸಿಕೊಂಡು ಕಾದ ಎಣ್ಣೆಗೆ ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ, ರುಚಿಕರವಾದ ಛೋಲೆ ಭಟೂರೆ ಸವಿಯಲು ಸಿದ್ಧ.