ಟೊಮೆಟೋ ಎಗ್ ಮಸಾಲಾ
ರುಚಿಕರವಾದ ಟೊಮೆಟೋ ಎಗ್ ಮಸಾಲಾ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಮೊಟ್ಟೆ- ಬೇಯಿಸಿದ್ದು 5
- ಟೊಮೆಟೋ ಪ್ಯೂರಿ- 1 ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ಶುಂಠಿ- ಸ್ವಲ್ಪ
- ಬೆಳ್ಳುಳ್ಳಿ- 5-6 ಎಸಳು
- ಎಣ್ಣೆ- ಎರಡು ಚಮಚ
- ಈರುಳ್ಳಿ- ಸಣ್ಣಗೆ ಹೆಚ್ಚಿದ್ದು ಅರ್ಧ ಬಟ್ಟಲು
- ದನಿಯಾ ಪುಡಿ- ಅರ್ಧ ಚಮಚ
- ಸ್ಕೀಝ್ವಾನ್ ಸಾಸ್- 2 ಚಮಚ
- ಕಸೂರಿ ಮೇಥಿ- ಸ್ವಲ್ಪ
ಮಾಡುವ ವಿಧಾನ...
- ಬೇಯಿಸಿದ್ದ ಮೊಟ್ಟೆಗಳನ್ನು ತೆಗೆದುಕೊಂಡು ಮೊಟ್ಟೆಯ ಬಿಳಿ ಭಾಗದ ಮೇಲ್ಭಾಗದಲ್ಲಿ ಸ್ವಲ್ಪ ಸ್ವಲ್ಪವೇ ಐದು ಕಡೆ ಓಪನ್ ಮಾಡುವಂತೆ ಸಣ್ಣದಾಗಿ ಕತ್ತರಿಸಬೇಕು. (ಮಸಾಲೆ ಒಳಗೆ ಹೋಗುವ ಸಲುವಾಗಿ)
- ನಂತರ ಮಿಕ್ಸಿ ಜಾರ್'ಗೆ ಟೊಮೆಟೋ ಪ್ಯೂರಿ, ಬೆಳ್ಳುಳ್ಳಿ, ಶುಂಠಿಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ರುಬ್ಬಿಕೊಂಡು ಟೊಮೆಟೋ ಪ್ಯೂರಿಯನ್ನು ಹಾಕಿ 5 ನಿಮಿಷ ಕುದಿಸಬೇಕು.
- ಬಳಿಕ ಉಪ್ಪು, ದನಿಯಾ ಪುಡಿ 1/3 ಬಟ್ಟಲು ನೀರು ಹಾಕಿ 5-6 ನಿಮಿಷ ಕುದಿಸಿ, ನಂತರ ಕತ್ತರಿಸಿಕೊಂಡ ಮೊಟ್ಟೆಗಳು, ಸ್ಕೀಝ್ವಾನ್ ಸಾಸ್, ಕಸೂರಿ ಮೇಥಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಟೊಮೆಟೋ ಎಗ್ ಮಸಾಲಾ ಸವಿಯಲು ಸಿದ್ಧ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.