ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬಾದಾಮಿ, ಜೇನುತುಪ್ಪ ಶ್ರೀಖಂಡ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
ಮೊಸರು - ಒಂದೂವರೆ ಬಟ್ಟಲು
ಸಕ್ಕರೆ ಪುಡಿ - 2 ಚಮಚ
ಬಾದಾಮಿ ಪುಡಿ - 3 ಚಮಚ
ಜೇನುತುಪ್ಪ - 1 ಚಮಚ
ಚಕ್ಕೆ ಪುಡಿ - ಅರ್ಧ ಚಮಚ
ಮಾಡುವ ವಿಧಾನ...
ಮೊಸರಿನಲ್ಲಿರುವ ನೀರನ್ನು ತೆಗೆಯಬೇಕು. ನೀರು ತೆಗೆದ ಗಟ್ಟಿ ಮೊಸರಿಗೆ ಸಕ್ಕರೆ ಪುಡಿ, ಬಾದಾಮಿ ಪುಡಿ, ಜೇನುತಪ್ಪು, ಚಕ್ಕೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಬಾದಾಮಿ, ಜೇನುತುಪ್ಪ ಶ್ರೀಖಂಡ್ ಸವಿಯಲು ಸಿದ್ಧ.