ಮಸಾಲೆ ಬಾತ್ 
ಅಡುಗೆ

ಮಸಾಲೆ ಬಾತ್

ರುಚಿಕರವಾದ ಮಸಾಲೆ ಬಾತ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು
  • ದನಿಯಾ (ಕೊತ್ತಂಬರಿ ಬೀಜ)- 1 ಚಮಚ
  • ಬಿಳಿ ಎಳ್ಳು - 1 ಚಮಚ
  • ಜೀರಿಗೆ - 1 ಚಮಚ
  • ಮೆಣಸು - 1 ಚಮಚ
  • ನಕ್ಷತ್ರ ಮೊಗ್ಗು - 1 
  • ಕೊಬ್ಬರಿ - ಸಣ್ಣ ಚೂರು 3-4
  • ಏಲಕ್ಕಿ - 1 
  • ಚಕ್ಕೆ - 2-3
  • ಲವಂಗ - 3-4
  • ಗಸಗಸೆ- 1 ಚಮಚ
  • ಎಣ್ಣೆ - 1 ಚಮಚ
  • ತುಪ್ಪ - ಸ್ವಲ್ಪ
  • ಪಲಾವ್ ಎಲೆ - 1-2
  • ಸಾಸಿವೆ - ಕಾಲು ಚಮಚ
  • ಈರುಳ್ಳು - 1-2
  • ಹಸಿ ಮೆಣಸಿನ ಕಾಯಿ - 2
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಟಮಚ
  • ಗೋಡಂಬಿ - 5-6
  • ಅಚ್ಚ ಖಾರದ ಪುಡಿ - 1 ಚಮಚ
  • ಅರಿಶಿನದ ಪುಡಿ - ಅರ್ಧ ಚಮಚ
  • ಅಕ್ಕಿ - ಒಂದು ಬಟ್ಟಲು
  • ತರಕಾರಿ- ಬೀನ್ಸ್, ಕ್ಯಾರೆಟ್, ಟೊಮೆಟೋ, ಬಟಾಣಿ, ಆಲೂಗಡ್ಡೆ, ಹೂಕೋಸು - 2 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು 
ಮಾಡುವ ವಿಧಾನ...
  • ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ದನಿಯಾ, ಬಿಳಿ ಎಳ್ಳು, ಜೀರಿಗೆ, ಮೆಣಸು, ನಕ್ಷತ್ರ ಮೊಗ್ಗು, ಕೊಬ್ಬರಿ, ಏಲಕ್ಕಿ, ಚಕ್ಕೆ, ಲವಂಗ, ಗಸಗಸೆ ಎಲ್ಲವನ್ನು ಕೆಂಪಗೆ ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು. 
  • ಒಲೆಯ ಮೇಲೆ ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಸಾಸಿವೆ, ಪಲಾವ್ ಎಲೆ ಹಾಕಬೇಕು. ನಂತರ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಹಸಿ ಮೆಣಸಿನ ಕಾಯಿ, ಟೊಮೆಟೋ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೈಯಾಡಿಸಬೇಕು. 
  • ಬಳಿಕ ಕತ್ತರಿಸಿಕೊಂಡ ಎಲ್ಲಾ ತರಕಾರಿಗಳನ್ನು ಹಾಕಿ ಉಪ್ಪು, ಪುಡಿ ಮಾಡಿಕೊಂಡ ಮಸಾಲೆ, ಅರಿಶಿನ, ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ಅಕ್ಕಿ ಹಾಗೂ 2 ಬಟ್ಟಲು ನೀರು ಹಾಕಿ 10 ನಿಮಿಷ ಬೇಯಿಸಿದರೆ ರುಚಿಕರವಾದ ಮಸಾಲೆ ಬಾತ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!