- ಬಟಾಣಿ (ಬೇಯಿಸಿದ್ದು)- 1 ಬಟ್ಟಲು
- ಹಸಿಮೆಣಸಿನ ಕಾಯಿ - 2-3
- ಶುಂಠಿ- ಸ್ವಲ್ಪ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಗೋದಿ ಹಿಟ್ಟು - 2 ಬಟ್ಟಲು
- ಜೀರಿಗೆ - ಅರ್ಧ ಚಮಚ
- ಗರಂ ಮಸಾಲೆ ಪುಡಿ - ಅರ್ಧ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ- ಅಗತ್ಯಕ್ಕೆ ಅನುಗುಣವಾಗಿ
- ಬೇಯಿಸಿ ನೀರು ತೆಗೆದ ಬಟಾಣಿ, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿಮೆಣಸಿನ ಕಾಯಿ ಹಾಗೂ ನೀರನ್ನು ಮಿಕ್ಸಿ ಜಾರ್'ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
- ಪಾತ್ರಯೊಂದಕ್ಕೆ ಗೋದಿ ಹಿಟ್ಟು, ಜೀರಿಗೆ, ಗಂರಂ ಮಸಾಲೆ ಪುಡಿ, ಉಪ್ಪು ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಂಡು, ನಂತರ ರುಬ್ಬಿಕೊಂಡ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ಸ್ವಲ್ಪವೇ ನೀರಿ ಹಾಕಿ ಹಿಟ್ಟನ್ನು ತಯಾರು ಮಾಡಿಕೊಳ್ಳಬೇಕು.
- ನಂತರ ಚಪಾತಿಯಾಕಾರಕ್ಕೆ ಲಟ್ಟಿಸಿಕೊಂಡು, ಒಲೆಯ ಮೇಲೆ ಹೆಂಚನ್ನು ಇಟ್ಟು ಎಣ್ಣೆ ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಬಟಾಣಿ ಪರೋಟ ಸವಿಯಲು ಸಿದ್ಧ.