ಚಿಕನ್ ಲಾಲಿಪಾಪ್
ರುಚಿಕರವಾದ ಚಿಕನ್ ಲಾಲಿಪಾಪ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಚಿಕನ್ ವಿಂಗ್ಸ್- 12-13 ಪೀಸ್
- ಉಪ್ಪು- ಅರ್ಧ ಚಮಚ
- ಕಾಳು ಮೆಣಸಿನ ಪುಡಿ - ಸ್ವಲ್ಪ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಸೋಯಾ ಸಾಸ್- 1 ಚಮಚ
- ಅಚ್ಛ ಖಾರದಪುಡಿ- 1 ಚಮಚ
- ಜೋಳದ ಹಿಟ್ಟು- ಮುಕ್ಕಾಲು ಬಟ್ಟಲು
- ಮೈದಾ ಹಿಟ್ಟು- ಅರ್ಧ ಬಟ್ಟಲು
- ಬೆಳ್ಳುಳ್ಳು ಪುಡಿ- ಅರ್ಧ ಚಮಚ
- ಎಣ್ಣೆ- ಕರಿಯಲು ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ...
- ಮೊದಲು ಚಿಕನ್'ನ್ನು ಚೆನ್ನಾಗಿ ತೊಳೆದು ನಿಧಾನವಾಗಿ ಲಾಲಿಪಾಪ್ ರೀತಿಯಲ್ಲಿ ಮೂಳೆಯನ್ನು ಮಧ್ಯೆ ಇರಿಸಿ ಚಿಕನ್'ನ್ನು ಮುಂದಕ್ಕೆ ಚಾಕುವಿನಿಂದ ತಳ್ಳಿ ಲಾಲಿಪಾಪ್ ರೀತಿ ತಯಾರಿಸಿಕೊಳ್ಳಬೇಕು.
- ನಂತರ ಇದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 15 ನಿಮಿಷ ನೆನೆಯಲು ಬಿಡಬೇಕು.
- ಮತ್ತೊಂದು ಪಾತ್ರೆಗೆ ಜೋಳದ ಹಿಟ್ಟು, ಮೈದಾಹಿಟ್ಟು, ಬೆಳ್ಳುಳ್ಳಿ ಪುಡಿ, ಅಚ್ಛ ಖಾರದ ಪುಡಿ, ಉಪ್ಪು ಹಾಗೂ ನೀರು ಹಾಕಿ ಸ್ವಲ್ಪ ಬೋಂಡಾ ಮಾಡುವ ಹದಕ್ಕೆ ಕಲಸಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಚೆನ್ನಾಗಿ ಕಾಯಲು ಬಿಡಬೇಕು.
- ಇದಕ್ಕೆ ಈಗಾಗಲೇ ಮಸಾಲೆಯಲ್ಲಿ ನೆನೆದ ಚಿಕನ್ ಪೀಸ್ ಗಳನ್ನು ಹಾಕಿ, ಎಣ್ಣೆಯಲ್ಲಿ ಬಿಟ್ಟು, ಚಿನ್ನದ ಬಣ್ಣ ಬರುವವರೆಗೆ ಕರಿದರೆ, ರುಚಿಕರವಾದ ಚಿಕನ್ ಲಾಲಿಪಾಪ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.