- ಎಣ್ಣೆ- 5-6 ಚಮಚ
- ಮೊಟ್ಟೆ- ಬೇಯಿಸಿದ್ದ 6
- ಶುಂಠಿ, ಬೆಳ್ಳುಳ್ಳಿ ಪೇಸ್ಡ್- 1 ಚಮಚ
- ಹಸಿಮೆಣಸಿನ ಕಾಯಿ-8ರಿಂದ 9 ಸಣ್ಣಗೆಹೆಚ್ಚಿದ್ದು
- ಈರುಳ್ಳಿ- ಸಣ್ಣಗೆ ಉದ್ದಕ್ಕೆ ಹೆಚ್ಚಿಕೊಂಡಿದ್ದು 1 ಚಿಕ್ಕ ಬಟ್ಟಲು
- ಕರಿಬೇವು- ಸ್ವಲ್ಪ
- ಟೊಮೆಟೋ ಪೇಸ್ಟ್- 1 ಬಟ್ಟಲು
- ಅರಿಶಿಣದ ಪುಡಿ- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಎಗ್ ಮಸಾಲೆಪುಡಿ- 1-2 ಚಮಚ
- ತೆಂಗಿನ ಕಾಯಿ ಹಾಲು- 1 ಬಟ್ಟಲು
- ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಈರುಳ್ಳಿ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ಬಳಿಕ ಟೊಮೆಟೋ ಪೇಸ್ಟ್, ಅರಿಶಿಣದಪುಡಿ, ಉಪ್ಪು, ಎಗ್ ಮಸಾಲೆ ಪುಡಿ, ತೆಂಗಿನ ಕಾಯಿ ಹಾಲು ಹಾಗೂ ಸ್ವಲ್ಪ ನೀರು ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಬೇಯಿಸಿಕೊಂಡ ಮೊಟ್ಟೆಯನ್ನ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಎಗ್ ಮಸಾಲೆ ಸವಿಯಲು ಸಿದ್ಧ.