- ಮೇಕೆ ಕಾಲು- 4
- ಶುಂಠಿ, ಬೆಳ್ಳುಳ್ಳಿ- ಸ್ವಲ್ಪ
- ಕರಿಬೇವು- ಸ್ವಲ್ಪ
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಪುದೀನಾ- ಸ್ವಲ್ಪ
- ಹಸಿಮೆಣಸಿನಕಾಯಿ- 3-4
- ಟೊಮೆಟೋ- 1
- ಕಾಳುಮೆಣಸು- ಸ್ವಲ್ಪ
- ಜೀರಿಗೆ- ಸ್ವಲ್ಪ
- ಎಣ್ಣೆ- ಸ್ವಲ್ಪ
- ಸಾಸಿವೆ-ಸ್ವಲ್ಪ
- ಅರಿಶಿನದಪುಡಿ-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ಶುಂಠಿ, ಬೆಳ್ಳುಳ್ಳಿ, ಮೆಣಸು ಮತ್ತು ಜೀರಿಗೆಯನ್ನು ಹುರಿದು ಪುಡಿ ಮಾಡಿಕೊಳ್ಳಬೇಕು.
- ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಹಾಕಿ ಸಾಸಿವೆ, ಕರಿಬೇವು, ಮೇಕೆ ಕಾಲು ಹಾಗೂ ಉಪ್ಪು ಹಾಕಬೇಕು.
- ಉಪ್ಪು ಮೇಕೆ ಕಾಲಿಗೆ ಹಿಡಿಯುವಂತೆ ಹುರಿದುಕೊಳ್ಳಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿಮೆಣಸಿನ ಕಾಯಿ, ಟೊಮೆಟೋ, ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಹುರಿದುಕೊಂಡು ನೀರು ಹಾಕಿ, ಜೀರಿಗೆ, ಕಾಳುಮೆಣಸಿನ ಪುಡಿ, ಅರಿಶಿಣದ ಪುಡಿ ಹಾಕಿ ಕುಕ್ಕಲ್ ಮುಚ್ಚಳ ಮುಚ್ಚಿ, 10-15 ಕೂಗು ಕೂಗಿಸಿಕೊಳ್ಳಬೇಕು. ಪ್ರೆಶರ್ ಸಂಪೂರ್ಣವಾಗಿ ಹೊರ ಬಂದ ಬಳಿಕ ಮುಚ್ಚಳ ತೆಗೆದು ಮತ್ತೆ ಸ್ವಲ್ಪ ಸಮಯ ಬೇಯಿಸಿದರೆ, ರುಚಿಕರವಾದ ಮಟನ್ ಕಾಲಿನ ಸೂಪ್ ಸವಿಯಲು ಸಿದ್ಧ.